Breaking News

ಗಡಿ ಬಂದ್‌, ಮಿಸೈಲ್ಸ್‌, ಸುಖೋಯಿ ಸಜ್ಜು;‌ ರಾಜಸ್ಥಾನ್‌, ಪಂಜಾಬ್‌ ಹೈಅಲರ್ಟ್!!

ಪಹಲ್ಗಾಮ್‌ ಭಯೋತ್ಪಾದನ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್‌ ಸಿಂದೂರ ಹೆಸರಿನಲ್ಲಿ ದಾಳಿ ನಡೆಸಿದ್ದ ಬೆನ್ನಲ್ಲೇ ಗಡಿ ರಾಜ್ಯಗಳಾದ ರಾಜಸ್ಥಾನ ಮತ್ತು ಪಂಜಾಬ್‌ ಅಲರ್ಟ್‌ ಆಗಿದ್ದು, ಪಾಕಿಸ್ತಾನ ಪಡೆಯಿಂದ ಯಾವುದೇ ಅಪ್ರಚೋದಿತ ಚಟುವಟಿಕೆ ಕಂಡು ಬಂದರೂ ಕಂಡಲ್ಲಿ ಗುಂಡಿಕ್ಕಲು ಬಿಎಸ್‌ ಎಫ್‌ ಗೆ ಆದೇಶ ನೀಡಲಾಗಿದೆ ಎಂದು ವರದಿ ತಿಳಿಸಿದೆ.ಮೇ 9ರವರೆಗೆ ಜೋಧ್‌ ಪುರ್‌, ಕಿಸಾನ್‌ ಗಢ್‌ ಮತ್ತು ಬಿಕಾನೇರ್‌ ವಿಮಾನ ನಿಲ್ದಾಣಗಳಿಂದ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ. ವರದಿ ಪ್ರಕಾರ, ಗಡಿಭಾಗಗಳಲ್ಲಿ ಮಿಸೈಲ್‌ ಡಿಫೆನ್ಸ್‌ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.ತುರ್ತು ಸಂದರ್ಭದಲ್ಲಿ ಗಡಿ ಭಾಗದ ಪ್ರದೇಶದ ಜನರ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದ್ದು, ಗಡಿಭಾಗದಲ್ಲಿ ಡ್ರೋನ್‌ ನಿಗ್ರಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೈಸಲ್ಮೇರ್‌ ಮತ್ತು ಜೋಧ್‌ ಪುರ್‌ ನಲ್ಲಿ ಮಧ್ಯರಾತ್ರಿಯಿಂದ ಮುಂಜಾನೆ 4ಗಂಟೆವರೆಗೆ ಬ್ಲ್ಯಾಕ್‌ ಔಟ್‌ (ವಿದ್ಯುತ್‌ ಸ್ಥಗಿತ)ಗೆ ಆದೇಶ ಹೊರಡಿಸಲಾಗಿದೆ ಎಂದು ವರದಿ ತಿಳಿಸಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *