ಟಿ ಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣ .ಉಡುಪಿ: ಕಳೆದ ವಿಧಾನಸಭಾ ಚುನಾವಣಾ ಸಂಧರ್ಭ ಬೆಂಗಳೂರಿನ ಸಮಾಜಿಕ ಕಾರ್ಯಕರ್ತ ಟಿಜಿ ಅಬ್ರಾಹಂ, ಪ್ರಮೋದ್ ಮಧ್ವರಾಜ್ ವಿರುದ್ದ 193 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ಸಂಭಂಧಿಸಿ ಪ್ರಮೋದ್ ಮಧ್ವರಾಜ್ ಉಡುಪಿ ನ್ಯಾಯಲಯದಲ್ಲಿ ಟಿಜೆ ಅಬ್ರಾಹಂ ವಿರುದ್ದ ಹತ್ತು ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.ಪ್ರಕರಣಕ್ಕೆ ಸಂಭಂಧಿಸಿದಂತೆ ಇಂದು ವಿಚಾರಣೆ ಪ್ರರಾಂಭವಾಗಿದೆ.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನ್ಯಾಯಲಕ್ಕ ಹಾಜರಾಗಿ ವಿಚಾರಣೆಯನ್ನ ಎದುರಿಸಿದರು.ಪ್ರಕರಣದ ಅರೋಪಿಯಾಗಿರುವ ಟಿ ಜೆ ಅಬ್ರಾಹಂ ಕೂಡ ನ್ಯಾಯಲಯಕ್ಕೆ. ಹಾಜರಾಗಿದ್ದರು.ಇದೇ ಪ್ರಕರಣಕ್ಕೆ ಸಂಭಂಧಿಸಿ ಟಿಜೆ ಅಬ್ರಾಹಂ ಈದಕ್ಕೆ ಸಂಭಂದಿಸಿದಂತೆ ಯಾವುದೇ ಮಾಧ್ಯಮ ಹೇಳಿಕೆಗಳನ್ನ ನೀಡದಂತೆ ತಂದಿದ್ದ ತಡೆಯಾಜ್ಞೆ ಯ ವಿಚಾರಣೆ ಕೂಡ ಇಂದು ನಡೆದಿದೆ.ಪ್ರಮೋದ್ ಮಧ್ವರಾಜ್ ಮಲ್ಪೆಯ ಸಿಂಡೀಕೇಟ್ ಬ್ಯಾಂಕಿನಲ್ಲಿ ಕಡಿಮೆ ಮೌಲ್ಯದ ಅಸ್ತಿ ಗೆ ಸುಮಾರು 193 ಕೋಟಿಗಳಷ್ಟು ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ಟಿಜೆ ಅಬ್ರಾಹಂ ಮಾಧ್ಯಮ ಗಳಲ್ಲಿ ಮೂಲಕ ಅರೋಪಿಸಿದ್ದರು.ಇದಕ್ಕೆ ಉತ್ತರವಾಗಿ ಪ್ರಮೋದ್ ಕ್ಷಮೆ ಕೇಳುವಂತೆ ಟಿಜೆ ಅಬ್ರಾಹಂ ಗೆ ನೋಟೀಸ್ ಜಾರಿ ಮಾಡಿದ್ದರು ,ಅದ್ರೆ ನೊಟೀಸ್ ಗೆ ಉತ್ತರಿಸದ ಟಿಜೆ ಅಬ್ರಾಹಂ ವಿರುದ್ದ ಉಡುಪಿ ಹಿರಿಯ ನ್ಯಾಯವಾದಿಗಳಾದ ಶಾಂತರಾಮ್ ಶೆಟ್ಟಿ ಮೂಲಕ ಮಾನ ನಷ್ಟ ಕೇಸನ್ನು ದಾಖಲಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





