ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅತ್ತೂರುಕೊಲ್ಲಿ ಅರಣ್ಯ ಪ್ರದೇಶದಲ್ಲಿ ಮೇ 5ರಿಂದ ಪ್ರತಿಭಟಿಸುತ್ತಿದ್ದ ಜೇನು ಕುರುಬ ಸಮುದಾಯಕ್ಕೆ ಸೇರಿದ 52 ಕುಟುಂಬಗಳಿಗೆ ಅರಣ್ಯದಿಂದ ಹೊರ ಹೋಗುವಂತೆ ಅರಣ್ಯ ಇಲಾಖೆ ಗುರುವಾರ ನೋಟಿಸ್ ನೀಡಿದೆ.ಹಾಗಾಗಿ, ಕೂಡಲೇ ಅರಣ್ಯದಿಂದ ಹೊರಬರಬೇಕು’ ಎಂದು ನಾಗರಹೊಳೆ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನನ್ಯಕುಮಾರ್ ಸೂಚಿಸಿದ್ದಾರೆ.ಈ ಮಧ್ಯೆ, ಪ್ರತಿಭಟನೆ ಬೆಂಬಲಿಸಲು ಅರಣ್ಯ ಪ್ರವೇಶಕ್ಕೆ ಮುಂದಾದವರನ್ನು ಪೊಲೀಸರು ಚೆಕ್‌ಪೋಸ್ಟ್ ನಿರ್ಮಿಸಿ ತಡೆದಿದ್ದಾರೆ. ಕೆಲವರ ವಿರುದ್ಧ ಪ್ರಕರಣ ದಾಖಲಿಸಿದೆ. ಬುಧವಾರ ರಾತ್ರಿ ಅರಣ್ಯದೊಳಗೆ ಪ್ಲಾಸ್ಟಿಕ್ ಜೋಪಡಿ ನಿರ್ಮಿಸುವ ಪ್ರಯತ್ನವನ್ನೂ ತಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

