Breaking News

ತಿರುಪತಿ ಲಡ್ಡು ಪ್ರಸಾದಕ್ಕೆ ನಂದಿನ ತುಪ್ಪ ಪೂರೈಕೆ ಸ್ಥಗಿತಗೊಳಿಸಲಾಗಿದೆ

ಬೆಂಗಳೂರು: ಕಳೆದ ಒಂದೂವರೆ ವರ್ಷದ ಹಿಂದೆಯೇ. ಅಂದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೇ ತಿರುಪತಿ ಲಡ್ಡು ಪ್ರಸಾದಕ್ಕೆ ನಂದಿನ ತುಪ್ಪ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ತಿರುಪತಿ ಪ್ರಸಾದಕ್ಕೆ ನಂದಿನ ತುಪ್ಪ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಕೆಎಂಎಫ್ ಎಂಡಿ ಜಗದೀಶ್, ತಿರುಪತಿ ಪ್ರಸಾದಕ್ಕೆ ಒಂದೂವರೆ ವರ್ಷದ ಹಿಂದೆಯೇ ನಂದಿನಿ ತುಪ್ಪ ಪೂರೈಕೆ ನಿಲ್ಲಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ನಾವು 345 ಮೆಟ್ರಿಕ್ ಟನ್ ನಂದಿನಿ ಬ್ರಾಂಡ್ ತುಪ್ಪವನ್ನು ತಿರುಪತಿ ಪ್ರಸಾದಕ್ಕೆ ಪೂರೈಕೆ ಮಾಡಿದ್ದೇವೆ. ತುಪ್ಪ ಪೂರೈಕೆಗಾಗಿ ನಾವು ಟಿಟಿಡಿ ಟೆಂಡರ್‌ನಲ್ಲಿ ಭಾಗವಹಿಸಿದರೆ ನಷ್ಟವಾಗುತ್ತದೆ. ಕಳೆದ ಬಾರಿ ನಾವು ಬಿಡ್ಡಿಂಗ್‌ನಲ್ಲಿ ಇಲ್ಲದಿದ್ದರೂ ಕೆಎಂಎಫ್‌ನಿಂದಲೇ (KMF) ನಂದಿನಿ ತುಪ್ಪ ಖರೀದಿಸಿದ್ದಾರೆ. ಈಗಲೂ ಅವರು ನಮ್ಮ ಬೆಲೆಗೆ ತುಪ್ಪ ಖರೀದಿಸಲು ಸಿದ್ಧರಿದ್ದರೆ ಪೂರೈಕೆ ಮಾಡುತ್ತೇವೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ತುಪ್ಪ ಖರೀದಿಯನ್ನು ಈಗ ಸ್ಥಗಿತಗೊಳಿಸಿದ್ದಾರೆ ಎನ್ನುವುದು ಸುಳ್ಳು’ ಎಂದು ಹೇಳಿದ್ದಾರೆ.

ಇನ್ನು ತಿರುಪತಿ ಪ್ರಸಾದಕ್ಕೆ ನಂದಿನಿ ತುಪ್ಪ ಖರೀದಿ ನಿಲ್ಲಿಸಿರುವ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್,ನಷ್ಟ ಮಾಡಿಕೊಂಡು ತುಪ್ಪ ಪೂರೈಕೆ ಮಾಡುವ ಅಗತ್ಯ ಇಲ್ಲ ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ನ ಮ್ಮ ಹೆಮ್ಮೆಯ ನಂದಿನಿಗೆ ಮಾರುಕಟ್ಟೆಯಲ್ಲಿತನ್ನದೇ ಆದ ಸ್ಥಾನವಿದೆ, ಉತ್ತಮ ಹೆಸರಿದೆ. ಗುಣಮಟ್ಟದಲ್ಲೂ ರಾಜಿಯಾಗುವುದಿಲ್ಲ, ಬೆಲೆಯಲ್ಲೂ ರಾಜಿಯಾಗುವುದಿಲ್ಲ. ಟೆಂಡರ್ ಪಡೆಯಬೇಕು ಎಂಬ ಒಂದೇ ಉದ್ದೇಶಕ್ಕಾಗಿ ಬೆಲೆಯಲ್ಲಿ ರಾಜಿ ಮಾಡಿಕೊಂಡು ನಷ್ಟಕ್ಕೆ ಗುರಿಯಾಗುವ ಅಗತ್ಯವಿಲ್ಲ. ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಯಾವ ಟೆಂಡರ್ ಕೈತಪ್ಪಿದರೂ ನಷ್ಟವಾಗುವುದಿಲ್ಲ’ ಎಂದು ಹೇಳಿದೆ

ತಿರುಪತಿ ದೇವಸ್ಥಾನಕ್ಕೆ ಲಡ್ಡುಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟವು ಇನ್ನು ಮುಂದೆ ನಂದಿನಿ ಬ್ರಾಂಡ್ ತುಪ್ಪವನ್ನು ಪೂರೈಸುತ್ತಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಭಾನುವಾರ ಸ್ಪಷ್ಟನೆ ನೀಡಿರುವ ಅವರು ನಂದಿನಿ ಬ್ರಾಂಡ್‌ನಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ಮತ್ತು ಅದರ ಗುಣಮಟ್ಟಕ್ಕೆ ಹೆಸರುವಾಸಿಯಾದ ಕೆಎಂಎಫ್, ಬೆಲೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ನಾವು ಟಿಟಿಡಿ ಟ್ರಸ್ಟ್‌ನ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ’ ಎಂದು ಅವರು ಹೇಳಿದರು.

ಹಲವು ವರ್ಷಗಳಿಂದ ತಿರುಪತಿ ಲಡ್ಡುಗೆ ಕೆಎಂಎಫ್ ತುಪ್ಪವನ್ನು ಬಳಸಲಾಗುತ್ತಿತ್ತು, ನಂದಿನಿ ತುಪ್ಪದ ಗುಣಮಟ್ಟಕ್ಕೆ ಬೇರೆ ಯಾವುದೇ ತುಪ್ಪ ನಿಲ್ಲುವುದಿಲ್ಲ ಎಂಬ ನಂಬಿಕೆ ನನ್ನದು; ನಮ್ಮ ಗ್ರಾಹಕರು ಶೇ.100 ರಷ್ಟು ಪ್ರಮಾಣೀಕರಣವನ್ನು ನಮಗೆ ನೀಡಿದ್ದಾರೆ’ ಎಂದು ಭೀಮಾ ನಾಯ್ಕ್ ಹೇಳಿದರು

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *