Breaking News

ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳಕ್ಕೆ ಅದ್ಧೂರಿ ತೆರೆ….

ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಶನಿವಾರ, ಭಾನುವಾರ ಬೆಂಗಳೂರಿಗರು ಕರ್ನಾಟಕ ಕರಾವಳಿ ಭಾಗದ ಜನಪ್ರಿಯ ಕ್ರೀಡೆಯಾದ ಕಂಬಳವನ್ನು ಕಣ್ತುಂಬಿಕೊಂಡರು. ಕರಾವಳಿ ಭಾಗದ ಖಾದ್ಯಗಳನ್ನು ಸವಿದರು. ಎರಡು ದಿನಗಳು ನಡೆದ ಕಂಬಳದಲ್ಲಿ ಸುಮಾರು 200 ಜೋಡಿ ಕೋಣಗಳು ಭಾಗವಹಿಸಿದ್ದವು. ಕಂಬಳ ಕಾರ್ಯಕ್ರಮದ ಕೊನೆಯ ದಿನ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದ ಕೋಣಗಳು ಅರಮನೆ ಮೈದಾನದಲ್ಲಿ ಚಿನ್ನ ಗೆದ್ದುಕೊಂಡಿವೆ. ಆರು ವಿಭಾಗಗಳಲ್ಲಿ ಕಂಬಳ ನಡೆದಿದ್ದು, ಒಂದು ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿವೆ. ಕಾಂತಾರ ಕೋಣಗಳ ಜೋಡಿಯಾದ ಅಪ್ಪು ಮತ್ತು ಕುಟ್ಟಿ, ಉಳಿದ ಜಾಕಿಗಳಿಗೆ ಕಠಿಣ ಹೋರಾಟ ನೀಡಿದರು ಮತ್ತು 155 ಮೀಟರ್ ಟ್ರ್ಯಾಕ್ ಮೂಲಕ ಓಡುವಾಗ 6 ಅಡಿವರೆಗೆ ನೀರು ಚಿಮ್ಮಿಸಿ ಪ್ರಶಸ್ತಿ ಗೆದ್ದುಕೊಂಡವು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *