ನಟ ದರ್ಶನ್ ಖದರ್ ಕರಗಿ ತಿಂಗಳುಗಳೇ ಕಳೆದಿವೆ. ಒಂದೇ ಒಂದು ದೊಡ್ಡ ದುರಂತ ದಾಸನ ಗತ್ತು ದೌಲತ್ತನ್ನೆಲ್ಲಾ ರಕ್ತದಲ್ಲಿ ಕೊಚ್ಚಿ ಹೋಗೋ ಹಾಗೆ ಮಾಡಿದೆ. ದರ್ಶನ್ ಈಗೇನಿದ್ರು ಅಮ್ಮಾವ್ರ ಗಂಡ. ದಾಸನಿಗೆ ಹೆಂಡತಿಯೇ ಬೆಂಗಾವಲು.ದರ್ಶನ್ ಸುತ್ತ ಇದ್ದವರೆಲ್ಲಾ ಕಿರಾತಕರೆ. ಆದ್ರೆ ಈಗ ಆ ಕಿರಾತಕ ಗ್ಯಾಂಗ್ ಅನ್ನ ದಚ್ಚು ದೂರ ಇಟ್ಟಿದ್ದಾರೆ. ಡ್ಯಾಮೇಜ್ ಆಗಿರೋ ದಾಸನ ಇಮೇಜ್ ಅನ್ನ ಮತ್ತೆ ಕಟ್ಟಿಕೊಡೋಕೆ ಪತ್ನಿ ವಿಜಯಲಕ್ಷ್ಮೀ ಪಣ ತೊಟ್ಟಿದ್ದಾರೆ.ನಟ ದರ್ಶನ್ ಸಂಪೂರ್ಣ ಜವಾಬ್ಧಾರಿ ವಿಜಯಲಕ್ಷ್ಮೀಯದ್ದು. ದಚ್ಚು ಬೆಳಗ್ಗೆ ಎದ್ದು ರಾತ್ರಿ ಮಲಗೋ ವರೆಗೂ ಏನ್ ಮಾಡಬೇಕು. ಏನು ಮಾಡಬಾರದು ಅಂತ ನಿರ್ಧರಿಸೋದು ವಿಜಯಲಕ್ಷ್ಮೀ. ಹೀಗಾಗಿ ದಾಸ ಶೂಟಿಂಗ್ ಬಿಟ್ರೆ ಸೀದಾ ಮನೆ ಸೇರಿಕೊಳ್ತಾರೆ. ದಚ್ಚುಗೆ ಬೇಕಾದ ಊಟ ಜಿಮ್ ಬಟ್ಟೆ ಹೀಗೆ ಪ್ರತಿಯೊಂದನ್ನ ನೋಡಿಕೊಳ್ಳೋದು ಪತ್ನಿಯೇ ಅಂತೆ. ದರ್ಶನ್ ಕೂಡ ನನಗೆ ಯಾರ್ ಸಹವಾಸವೂ ಬೇಡ ಅಂತ ಹೆಂಡತಿ ಜೊತೆಯೇ ಎಲ್ಲಾ ಕಡೆ ಓಡಾಡುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

