ಮುಂಬಯಿ ನಾಸಿಕ್ ಹೆದ್ದಾರಿಯ ಶಹಾಪುರ ತಾಲೂಕಿನ ವಾಫೆ ಗ್ರಾಮದ ಬಳಿ ಶಿರಡಿಗೆ ತೆರಳುತ್ತಿದ್ದ ಸಾಯಿಬಾಬಾ ಪಲ್ಲಕಿ ಯಾತ್ರಾರ್ಥಿಗಳ ಮೇಲೆ ಅಪರಿಚಿತ ವಾಹನವೊಂದು ಚಲಿಸಿದ ಪರಿಣಾಮ ಯುವಕನೋರ್ವ ಮೃತಪಟ್ಟು, ಇನ್ನೊಬ್ಬ ಗಾಯಗೊಂಡ ಘಟನೆ ಗುರುವಾರ ನಡೆದಿದೆ.ನ. 25ರಂದು ವಿರಾರ್‌ನಿಂದ ಯಾತ್ರಾರ್ಥಿಗಳ ತಂಡವೊಂದು ಸಾಯಿಬಾಬಾ ಪಲ್ಲಕಿಯೊಂದಿಗೆ ಶಿರಡಿಗೆ ಪಾದಯಾತ್ರೆ ಆರಂಭಿಸಿತ್ತು. ಗುರುವಾರ ಈ ತಂಡವು ಹೆದ್ದಾರಿಯಲ್ಲಿ ಶಿಸ್ತುಬದ್ಧವಾಗಿ ಸಾಗುತ್ತಿದ್ದಾಗ, ವೇಗವಾಗಿ ಬಂದ ವಾಹನವೊಂದು ಇಬ್ಬರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ವಾಹನವನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

