Breaking News

ಬೆಂಗಳೂರು :ವರ್ಕ್ ಫ್ರಮ್ ಹೋಂ ನೆಪದಲ್ಲಿ ವಂಚನೆ, 12 ಆರೋಪಿಗಳ ಸೆರೆ!!

ವರ್ಕ್ ಫ್ರಮ್ ಹೋಂನಲ್ಲಿ ಪ್ರಾಜೆಕ್ಟ್ ಇರುವುದಾಗಿ ಹೇಳಿ ವಂಚನೆ ಮಾಡುತ್ತಿದ್ದ 12 ಸೈಬರ್ ಕಳ್ಳರ ಗ್ಯಾಂಗ್ ಅನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.ಮಹಿಳೆಗೆ ನಂಬಿಸಿ ಸ್ಕೋರ್ ಬ್ಯಾಲೆನ್ಸ್‌ಶೀಟ್‌ನಲ್ಲಿ 10,82,502 ರೂ. ತೋರಿಸಿದ್ದು, ವಿತ್‌ಡ್ರಾಗೆ 5 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ್ದ.ದುರಾಸೆಗೆ ಬಿದ್ದ ಮಹಿಳೆ, ಹಂತ ಹಂತವಾಗಿ ಅಪರಿಚಿತ ಹೇಳಿದ ಬ್ಯಾಂಕ್ ಖಾತೆಗಳಿಗೆ 5 ಲಕ್ಷ ರೂ. ಜಮೆ ಮಾಡಿದ್ದರು. ಇನ್ನೂ 3.24 ಲಕ್ಷ ರೂ. ಜಮಾ ಮಾಡಿದಾಗ ಮಾತ್ರ 10 ಲಕ್ಷ ರೂ. ವಾಪಸ್ ಬರಲಿದೆ ಎಂದು ಷರತ್ತು ವಿಧಿಸಿದ್ದರು. ಅನುಮಾನಗೊಂಡ ಮಹಿಳೆ, ಆಡುಗೋಡಿ ಠಾಣೆಗೆ ದೂರು ಸಲ್ಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಸಿ. ರವಿಕುಮಾರ್ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಹಣ ವರ್ಗಾವಣೆ ಆಗಿದ್ದ ೆಡರಲ್ ಬ್ಯಾಂಕ್ ಖಾತೆ ವಿವರ ಪಡೆದಾಗ ಉತ್ತರ ಪ್ರದೇಶದ ಶಾಖೆಯದು ಎಂಬ ಸುಳಿವು ಲಭ್ಯವಾಗಿತ್ತು.ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಾಗ ಮುಂಬೈನಲ್ಲಿ ಇರುವ ಲೇಬರ್ ಗುತ್ತಿಗೆದಾರ ಸೋನು ಎಂಬಾತ ಬ್ಯಾಂಕ್ ಖಾತೆಗಳನ್ನು ತೆರೆಸಿ ಪಾಸ್‌ಬುಕ್, ಎಟಿಎಂ, ಸಿಮ್ ಕಾರ್ಡ್ ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಮುಂಬೈಗೆ ತೆರಳಿದ ಪೊಲೀಸರು, ಸೋನುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಆತ ಕೆಲಸಕ್ಕೆ ಬರುತ್ತಿದ್ದ ನೌಕರರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಪಾಸ್‌ಬುಕ್, ಎಟಿಎಂ, ಸಿಮ್ ಕಾರ್ಡ್ ಪಡೆದು ಉತ್ತರ ಪ್ರದೇಶದ ಮೂವರು ವ್ಯಕ್ತಿಗಳಿಗೆ ನೀಡುತ್ತಿದ್ದ. ಪ್ರತಿಯಾಗಿ 1 ಖಾತೆಗೆ 1,500 ರೂ. ಕಮಿಷನ್ ಕೊಡುತ್ತಿದ್ದರು ಎಂದು ಬಾಯ್ಬಿಟ್ಟಿದ್ದ. ಈತ ಕೊಟ್ಟ ಮಾಹಿತಿ ಮೇರೆಗೆ ಪ್ರಯಾಗ್‌ರಾಜ್‌ನ ಕಮಲಾನಗರದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದಾಗ, ಕಿಂಗ್‌ಪಿನ್ ಹರ್ಷವರ್ಧನ್ ಓಜಾ ಸೇರಿ 10 ಮಂದಿ ಸೆರೆಸಿಕ್ಕರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *