Breaking News

ಹುಬ್ಬಳ್ಳಿ : ಕಾಂಗ್ರೆಸ್ ಯಾವಾಗಲೂ ದೇಶದ ಪರವಾಗಿ ನಿಂತಿಲ್ಲ, ಸಚಿವೆ ಶೋಭಾ ಕರಂದ್ಲಾಜೆ ಕಿಡಿ..!

ಹುಬ್ಬಳ್ಳಿ: ದೇಶ ಸಂಕಷ್ಟ ಮತ್ತು ಸಾಧನೆ ಸಮಯದಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಮಾತನಾಡುತ್ತದೆ. ಅಧಿಕಾರದಲ್ಲಿದ್ದಾಗ ಸೈನ್ಯವನ್ನು ಗಟ್ಟಿ ಮಾಡೋ ಕೆಲಸ ಮಾಡಲಿಲ್ಲಾ. ಕಾಂಗ್ರೆಸ್ ಎಚ್ ಎ ಎಲ್ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಹಣ ಕಡಿಮೆ ಮಾಡಿತ್ತು. ಮೋದಿಯವರ ನೇತೃತ್ವದಲ್ಲಿ ಭಾರತೀಯ ಸೈನ್ಯ ಇಂದು ಸ್ವಾವಲಂಭಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಇಂದು ಕಾಂಗ್ರೆಸ್ ಅನವಶ್ಯಕ ಆರೋಪ ಮಾಡುತ್ತಿದೆ. ಸಿದ್ದರಾಮಯ್ಯ ನವರು ಯುದ್ದ ಯಾಕೆ ಬೇಕು ಅಂತ ಹೇಳಿದ್ರು. ಈ ಮಾತುಗಳು ನಿಮ್ಮ ಹೈಕಮಾಂಡ ಸೂಚನೆ ಮೇರಿಗೆ ಮಾತನಾಡ್ತಿದ್ದೀರಾ..? ಕಾಂಗ್ರೆಸ್ ನುಗ್ಗಿ ಹೊಡೆದವರಿಗೆ ಅಪಮಾನ ಮಾಡುತ್ತಿದೆ. ಕಾಂಗ್ರೆಸ್ ಯಾವಾಗಲು ದೇಶದ ಪರ ನಿಂತಿಲ್ಲಾ. ಅವರ ಆಳ್ವಿಕೆ ಸಮಯದಲ್ಲಿ ಭಾರತದ ಭೂಮಿಯನ್ನು ಬಿಟ್ಟುಕೊಡಲಾಯಿತು. ಚೀನಾ, ಬಾಂಗ್ಲಾ, ಪಾಕಿಸ್ತಾನ ಕ್ಕೆ ಬಿಟ್ಟು ಕೊಟ್ಟಿದೆ ಎಂದರು.ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುವುದನ್ನು ತಿರುಗಿ ನೋಡಬೇಕು. ನಮ್ಮ ಸೈನಿಕರ ಬಗ್ಗೆ ನಮಗೆ ಹೆಮ್ಮೆಯಿದೆ. ಪಾಕ್ ಗೆ ನುಗ್ಗಿ ಉಗ್ರರನ್ನು ಹೊಡೆದಿರುವುದು ನಮ್ಮ ಆತ್ಮ ನಿರ್ಭರ ಭಾರತ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *