ಗೋಣಿಕೊಪ್ಪ ರಸ್ತೆಯಲ್ಲಿನ ಉತ್ತೇನಹಳ್ಳಿ ಗೇಟ್ ಬಳಿ ಇರುವ ಖಾಸಗಿ ಹೊಟೇಲ್ ಮುಂಭಾಗ ಆರೋಪಿ ಮತೀನ್ಖಾನ್ ಭಾನುವಾರ ಮಧ್ಯಾಹ್ನ ಪ್ಲಾಸ್ಟಿಕ್ ಕವರ್ನಲ್ಲಿ ಗಾಂಜಾ ಇಟ್ಟುಕೊಟ್ಟು ಸಾರ್ವಜನಿಕರಿಗೆ ₹ 150 ರಿಂದ ₹ 200ಗಳಿಗೆ ಮಾರಾಟ ಮಾಡುತ್ತಿದ್ದು ಈ ವೇಳೆ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು, ಪಿಎಸ್ಐ ನವ್ಯಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿ ತಪಾಸಣೆ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂ ಮಹಾದೇವಪ್ಪ, ಬಸವರಾಜು, ಪುನೀತ್, ಅಣ್ಣಯ್ಯ, ಮಂಜು ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

