ಇಂದು ವಿಶ್ವದಾದ್ಯಂತ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಾರತೀಯ ಪರಂಪರೆ ಹಾಗೂ ಆರೋಗ್ಯಪೂರ್ಣ ಸಂಪ್ರದಾಯದ ರಾಯಭಾರಿಯಂತಿರುವ ಯೋಗ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಭಾರತ ಸರ್ಕಾರವೂ ಸಹ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಯೋಗ ಎಂಬುದು ವಿಶ್ವಕ್ಕೆ ಭಾರತ ನೀಡಿದ ಒಂದು ಅಭುತಪೂರ್ವ ಕೊಡುಗೆಯಾಗಿದೆ. ಸಾವಿರಾರು ವರ್ಷಕ್ಕೂ ಹಳೆಯದಾದ ಈ ಪದ್ಧತಿಯನ್ನು ಪ್ರಸ್ತುತ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಅನುಸರಿಸುತ್ತಿವೆ. ಇದರ ಪರಿಣಾಮವಾಗಿ ಇಂದು ಜನರ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿ ಯೋಗ ಬದಲಾಗಿದೆ. ಇದೇ ಕಾರಣಕ್ಕೆ ಯೋಗದ ಮಹತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಬೇಕು ಹಾಗೂ ಅಧಿಕೃತವಾಗಿ ಯೋಗ ದಿನಾಚರಣೆಯನ್ನು ಆಚರಿಸಿ ಬೇಕು ಎಂದು ಭಾರತ ಸರ್ಕಾರ ಬಹಳ ಹಿಂದೆಯೇ ನಿರ್ಧರಿಸಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





