ದೆಹಲಿಯಿಂದ ಆಸ್ಸಾಂಗೆ ವರ್ಗಾವಣೆಯಾದ ಹಿನ್ನೆಲೆ ರಜೆ ಮೇಲೆ ಊರಿಗೆ ಬಂದಿದ್ದ ಯೋಧನ ಮೇಲೆ ಹಲ್ಲೆ ನಡೆದಿದೆ. ಅಕ್ಕನ ಜಮೀನಿನ ಬದುವಿನ ವಿಚಾರದಲ್ಲಿ ಅಕ್ಕನ ಪರ ನ್ಯಾಯ ಕೇಳಿದ್ದರಿಂದ ಜಗಳವಾಗಿದ್ದು, ಪಕ್ಕದ ಜಮೀನಿನ ಅಮರೇಶ್, ಮಂಜುನಾಥ ಎಂಬುವವರು ಹಲ್ಲೆ ನಡೆಸಿದ್ದಾರೆ.ವಾಕಿಂಗ್ ಮಾಡುತ್ತಿದ್ದಾಗ ಏಕಾಏಕಿ ಬಂದ ಅಮರೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚನ್ನಬಸಪ್ಪ ತಪ್ಪಿಸಿಕೊಂಡು ಓಡಿದ್ದು, ಆದರೂ ಬಿಡದೇ ಬೆನ್ನಟ್ಟಿ ಹಲ್ಲೆಗೆ ಮುಂದಾಗಿದ್ದಾರೆ. ಆಗ ಸ್ಥಳೀಯರು ಸಹಾಯಕ್ಕೆ ಮುಂದಾಗಿದ್ದಾರೆ. ಸದ್ಯ ಗಾಯಾಳು ಯೋಧನನ್ನ ಲಿಂಗಸುಗೂರಿನ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಈ ಘಟನೆ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

