Breaking News
Featured Video Play Icon

ಕಮೀಷನರ್ ವಸೂಲಿ ದಂಧೆಗೆ ಇಳಿದರಾ..?! ಅರೆ ಏನ ನಡೀತಿದೆ ನಮ್ಮ ಹುಬ್ಬಳ್ಳಿ-ಧಾರವಾಡದಲ್ಲಿ..!

ಹುಬ್ಬಳ್ಳಿ ಪೋಲೀಸ ಬಗ್ಗೆ ಅವರ ಇಲಾಖೆಯ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸಿದ್ದಾರಂತೆ,ಹುಬ್ಬಳ್ಳಿಯಲ್ಲಿ ಎಲ್ಲಾ ಅಕ್ರಮ ದಂಧೆಗಳು ಸರಳವಾಗಿ ನಡೆದಿವೆಯಂತೆ.ಯಾರಿಗೋ ಒಬ್ಬರಿಗೆ ಗುಂಡು ಹೊಡೆಯೋದು.ಹತ್ತ ಮಂದಿಗೆ ಹೆದರಿಸಿ,ಗುಂಡು ಹೊಡಿತೇನಿ ಅಂತಾ ವಸೂಲಿ ಮಾಡೋದಂತೆ. ಮಟಕಾ,ಗಾಂಜಾ,ಕ್ರಿಕೆಟ್ ಬೆಟ್ಟಿಂಗ್..ರೀಯಲ್ ಎಸ್ಟೇಟ್ ಎಲ್ಲಾ ದಂಧೆಗಳು ಅರಾಮಾಗಿ ನಡೆದಿವೆಯಂತೆ.

ಹೌದು ಹುಬ್ಬಳ್ಳಿ-ಧಾರವಾಡದ ಪೋಲೀಸ ಕಮೀಷನರ್ ಎನ್.ಶಶಿಕುಮಾರ ವಿರುದ್ದ ಶಾಸಕ ಅರವಿಂದ ಬೆಲ್ಲದ ಅವರೇ ಗಂಭಿರ ಆರೋಪ ಮಾಡಿದ್ದಾರೆ.. ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಮತ್ತು ಅವರ ಸಿಬ್ಬಂದಿ ವರ್ಗ ಸಂಪೂರ್ಣವಾಗಿ ವಸೂಲಿ ದಂಧೆಗೆ ಇಳಿದಿದ್ದಾರೆ. ಜನರ ಅನುಕೂಲಕ್ಕಾಗಿ ಏನೂ ಕೆಲಸ ಮಾಡತಿಲ್ಲಾ… ಹುಬ್ಬಳ್ಳಿ-ಧಾರವಾಡದಲ್ಲಿ.. ಮಟಕಾ..ಗಾಂಜಾ.. ಇಸ್ಪೀಟ್ ಕ್ಲಬ್ ಗಳು..ರೀಯಲ್ ಎಸ್ಟೇಟ್ ..ಕ್ರಿಕೆಟ್ ಬೆಟ್ಟಿಂಗ್.. ನಂತಹ ದಂಧೆಗಳು ಅತ್ಯಂತ ಸರಳವಾಗಿ ನಡಿದಿವೆ.ಕೆಲ ಪೋಲೀಸ ಅಧಿಕಾರಿಗಳು ಹಾಗೂ ಪೋಲೀಸರು ನಮ್ನ ಇಲಾಖೆಗೆ ಏನಾಗಿದೆರೀ ಅಂತಾ ನಮ್ಮ ಮುಂದೆ ಬೇಸರ ಹೊರಹಾಕಿದ್ದಾರೆ.ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ ಹಾಗೂ ಸಿಬ್ಬಂದಿ ವರ್ಗದವರ ವಿರುದ್ದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಮಂತ್ರಿಗಳಿಗೆ ವಿಶೇಷವಾಗಿ ಮನವಿ ಮಾಡತೇನಿ ಹುಬ್ಬಳ್ಳಿ-ಧಾರವಾಡದಲ್ಲಿ ಏನ ನಡಿದಿದೆ ಅಂತಾ ಗಮನಿಸಿ ಇಮಿಡಿಯೇಟ್ ಕ್ರಮಕೈಕೊಳ್ಳಬೇಕು ಎಂದು ಶಾಸಕ ಅರವಿಂದ ಬೆಲ್ಲದ ಮನವಿ ಮಾಡಿದ್ದಾರೆ.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *