ಭಾರತವು ಈಗ ಜಪಾನ್ ಅನ್ನು ಮೀರಿಸಿ, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕಶಕ್ತಿಯಾಗಿ ಹೊರಹೊಮ್ಮಿದೆ. ಈ ಬಗ್ಗೆ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಬಹಿರಂಗಪಡಿಸಿದ್ದಾರೆ. ಅವರು ಶನಿವಾರ ನಡೆದ ನೀತಿ ಆಯೋಗದ 10ನೇ ಆಡಳಿತ ಮಂಡಳಿಯ ಸಭೆ ನಂತರ ಮಾತನಾಡುತ್ತಾ, “ಭಾರತದ ಆರ್ಥಿಕತೆ ಈಗ 4 ಟ್ರಿಲಿಯನ್ ಡಾಲರ್ ಆಗಿದೆ.ಅಷ್ಟೆ ಅಲ್ಲದೆ ಭಾರತ ಅಮೆರಿಕಾ, ಚೀನಾ ಮತ್ತು ಜರ್ಮನಿಯ ನಂತರದ ಸ್ಥಾನದಲ್ಲಿದ್ದು, ಮುಂದಿನ 2.5 ರಿಂದ 3 ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಮಾರಾಟವಾಗುವ ಆಪಲ್ ಐಫೋನ್‌ಗಳನ್ನು ಭಾರತ ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಅಲ್ಲ, ಅಮೆರಿಕದಲ್ಲಿ ತಯಾರಿಸಬೇಕೆಂದು ನಿರೀಕ್ಷಿಸುತ್ತೇನೆ ಎಂಬ ಇತ್ತೀಚಿನ ಹೇಳಿಕೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸುಬ್ರಹ್ಮಣ್ಯಂ “ಸುಂಕದ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಭಾರತ ತಯಾರಿಕೆಗೆ ಅಗ್ಗದ ದೇಶವಾಗಿದೆ” ಎಂದರು. ಅಲ್ಲದೆ, ಅವರು ಆಗಸ್ಟ್‌ನಲ್ಲಿ ಆಸ್ತಿ ಹಣಗಳಿಕೆ ಎರಡನೇ ಹಂತದ ಯೋಜನೆಯನ್ನು ಘೋಷಿಸಲಾಗುವುದು ಎಂದೂ ಹೇಳಿದರು.ಯಾವ್ಯಾವ ರಾಜ್ಯಗಳು ಈ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತವೆಯೋ, ಅವುಗಳು ಮುಂದಿನ ವರ್ಷಗಳಲ್ಲಿ ವಿಕಸಿತವಾಗುವ ಸಾಧ್ಯತೆ ಹೆಚ್ಚು” ಎಂದು ಅವರು ಹೇಳಿದರು. ಉಳಿದ ರಾಜ್ಯಗಳು ಸಹ ಇದೇ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

