Breaking News

ಪುತ್ತೂರು | ತಲುವಾರು ಪ್ರದರ್ಶಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ

ನಗರದ ಹೊರವಲಯದ ಮುಕ್ವೆ ಜಂಕ್ಷನ್‌ನಲ್ಲಿ ರಾತ್ರಿ ತಲವಾರು ಝಳಪಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಮಹಮ್ಮದ್ ಸಿರಾಜುದ್ದೀನ್ ಎಂಬುವರು ನೀಡಿರುವ ದೂರಿನಂತೆ ಆರೋಪಿ ಮುಕ್ವೆಯ ಅಬ್ದುಲ್ ರಹಿಮಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಅಬ್ದುಲ್ ರಹಿಮಾನ್ ಶುಕ್ರವಾರ ರಾತ್ರಿ ಮುಕ್ವೆ ಮಸೀದಿಯ ಬಳಿ ಬಂದು, ಗಲಾಟೆ ಎಬ್ಬಿಸಿದ್ದ. ಈ ವೇಳೆ ಮಸೀದಿ ಸಮಿತಿ ಸದಸ್ಯರು ಅಲ್ಲಿಂದ ಆತನನ್ನು ಕಳುಹಿಸಿದ್ದರು. ಮತ್ತೆ ಅಲ್ಲಿಗೆ ಬಂದ ಅಬ್ದುಲ್ ರಹಿಮಾನ್ ಕೈಯಲ್ಲಿ ತಲವಾರು ಹಿಡಿದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಬಳಿಕ ಜನ ಸೇರುವುದನ್ನು ನೋಡಿ ಅಲ್ಲಿಂದ ರಿಕ್ಷಾವೊಂದರಲ್ಲಿ ತೆರಳಿದ್ದ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *