Breaking News

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ!

ಡೆಲಿವರಿ ಕೊಡಲು ಡೆಲಿವರಿ ಬಾಯ್ ವಿಷ್ಣುವರ್ಧನ್, ಶಶಾಂಕ್ ಅವರ ಮನೆ ಬಳಿ ಬಂದಿದ್ದಾನೆ. ಈ ವೇಳೆ ಶಶಾಂಕ್ ಅವರ ನಾದಿನಿ ಆ ವಸ್ತುಗಳನ್ನು ಪಡೆದುಕೊಳ್ಳಲು ಹೋಗಿದ್ದು, ಆಗ ಸರಿಯಾದ ವಿಳಾಸ ನೀಡಲು ಆಗುವುದಿಲ್ಲವೇ ಎಂದು ಶಶಾಂಕ್ ಅವರ ನಾದಿನಿಗೆ ವಿಷ್ಣುವರ್ಧನ್ ಜೋರಾಗಿ ಬೈಯಲು ಆರಂಭಿಸಿದ್ದ. ಇದನ್ನು ಕೇಳಿಸಿಕೊಂಡ ಶಶಾಂಕ್ ಮಧ್ಯ ಪ್ರವೇಶಿಸಿ, ಏಕೆ ಇಷ್ಟು ಜೋರಾಗಿ ಮಾತನಾಡುತ್ತಿದ್ದೀರಾ? ಹೆಣ್ಣು ಮಕ್ಕಳೊಂದಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ವಿಷ್ಣುವರ್ಧನ್, ನಾನು ಅವಳ ಜತೆ ಮಾತನಾಡುತ್ತಿರುವೆ. ನೀನು ಯಾರೋ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಏಕಾಏಕಿ ಶಶಾಂಕ್ ಅವರ ಎಡಭಾಗದ ಕಣ್ಣಿನ ಭಾಗಕ್ಕೆ ಕೈನಿಂದ ಹಲವು ಬಾರಿ ಗುದ್ದಿದ್ದಾನೆ. ತಪ್ಪಿಸಿಕೊಳ್ಳಲು ಮುಂದಾದಾರು ಅಡ್ಡಗಟ್ಟಿ ಶಶಾಂಕ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಹಲ್ಲೆಯಿಂದ ಗಾಯಗೊಂಡಿದ್ದ ಶಶಾಂಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *