ಹುಬ್ಬಳ್ಳಿ :ಹುಬ್ಬಳ್ಳಿಯ ಘಟನೆ ಪೂರ್ವನಿಯೋಜಿತ ಎನ್ನೋದು ಗೊತ್ತಾಗಿದೆ. ಎಲ್ಲೋ ಒಂದು ಕಡೆ ಯಾರೋ ಕರೆ ಕೊಡ್ತಾರೆ. ಅವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು. ಕರವಾಳಿಯ ಒಂದು ಜಿಲ್ಲೆಯಲ್ಲಿ ಸಮವಸ್ತ್ರದ ವಿಷಯ ಇಡೀ ರಾಜ್ಯಕ್ಕೆ ಹಬ್ಬಿತ್ತು. ಅದಾದ ನಂತರ ಭಾವೈಕತ್ಯೆ ಕೆಡಿಸೋ ಕೆಲಸಕ್ಕೆ ಕೆಲ ಸಂಘಟನೆಗಳು ಕೈ ಹಾಕಿದ್ದವು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿಯೂ ಯುವಕನ ವಿವಾದ್ಮತಕ ಪೋಸ್ಟ್, ಮಸೀದಿ ಮೇಲೆ ಲೇಸರ್ ಲೈಟ್ ಘಟನೆ ಆಗಿದ್ದವು. ಅದೃಷ್ಟವಶಾತ್ ಪೊಲೀಸರು ದೊಡ್ಡ ಮಟ್ಟದ ಅನಾಹುತವಾಗೋದನ್ನ ತಪ್ಪಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ. ಇದಕ್ಕೆ ಹಿಂದೂ-ಮುಸ್ಲಿಂ ಎರಡೂ ಕಡೆಯವರು ಹೇಳ್ತಿದ್ದಾರೆ. ಆದ್ರೆ ಕೆಲ ಅಮಾಯಕರಿಗೆ ಇದ್ರಿಂದ ತೊಂದರೆಯಾಗಬಾರದು. ಸದ್ಯ ಪರಸ್ಥಿತಿ ಶಾಂತ ರೀತಿಯಿಂದ ಇದೆ. ಅದನ್ನ ಕೆದಕೋ ಪ್ರಯತ್ನ ಮಾಡೋದಿಲ್ಲ.ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಎಂದರು.
ಮತ್ತೇ ಮುಂದುವರೆದ ಮಾತನಾಡಿದ ಅವರು, ಹುಬ್ಬಳ್ಳಿ ಘಟನೆ ಮೊದಲೇ ಸರ್ಕಾರ ಈ ಬಾಯ್ಕಟ್ ಅಭಿಯಾನ ಚಿವುಟಿ ಹಾಕಿದ್ರೆ ಈ ರೀತಿ ಘಟನೆ ಅಗ್ತಿರಲಿಲ್ಲ. ಸರ್ಕಾರ ಬಿಜೆಪಿಯದ್ದಿದ್ದೆ.ಕಾಂಗ್ರೆಸ್ ಇರಲಿ ಯಾರದ್ದೆ ಕೈವಾಡ ಇರಲಿ ಕ್ರಮ ಕೈಗೊಳ್ಳಲಿ. ಅದು ಕೇವಲ ಆರೋಪಕ್ಕೆ ಸೀಮಿತವಾಗಬಾರದು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

