ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದ್ದಲ್ಲದೆ ಕಮಲ್ ಹಾಸನ್ ಕನ್ನಡಿಗರಿಗೆ ಅವಮಾನ ಮಾಡಿಯೂ ಮೊಂಡಾಟ ಮುಂದುವರಿಸಿದ್ದಾರೆ. ಈ ಹಿನ್ನೆಲೆ ಮಾಡಿದ ತಪ್ಪಿಗೆ ಕ್ಷಮೆಯೂ ಕೇಳದ ಕಾರಣ ಕಾರಣ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಖಡಕ್ ಸಂದೇಶವೊಂದನ್ನು ಕಮಲ್ ಹಾಸನ್‌ಗೆ ರವಾನಿಸಿದ್ದಾರೆ.ಕಮಲ್ ಥಗ್‌ಲೈಫ್ ಸಿನಿಮಾ ಮಾತ್ರವಲ್ಲ, ಅವರಿಗೂ ಕರ್ನಾಟಕದಲ್ಲಿ ಎಂಟ್ರಿ ಇಲ್ಲ. ಕಮಲ್ ಅವರನ್ನೂ ಕರ್ನಾಟಕದಲ್ಲಿ ಬ್ಯಾನ್ ಮಾಡುತ್ತೇವೆ ಎಂದು ಕರವೇ ನಾರಾಯಣಗೌಡ ಹೇಳಿದ್ದಾರೆ. ಈ ಸಿನಿಮಾ ಮಾತ್ರವಲ್ಲ, ಇನ್ನು ಮುಂದೆ ಕಮಲ್ ಅವರ ಯಾವುದೇ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗುವುದಿಲ್ಲ, ಆಗಲು ನಾವು ಬಿಡೋದಿಲ್ಲ. ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿದ್ದಲ್ಲದೆ, ಕ್ಷಮೆಯೂ ಕೇಳದೆ ದುರಹಂಕಾರ ಮೆರೆದಿದ್ದಾರೆ. ಹಾಗಾಗಿ ಕಮಲ್ ಹಾಸನ್ ಎಂದಿಗೂ ಕರ್ನಾಟಕಕ್ಕೆ ಬರಬಾರದು. ಒಂದು ವೇಳೆ ಬಂದರೆ ನಾವು ತಡೆಯುತ್ತೇವೆ ಎಂದು ಎಚ್ಚರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

