ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಮತ್ತು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹತ್ತು ದಿನಗಳಲ್ಲಿ 2 ಹುಲಿಗಳು 5 ಜಾನುವಾರುಗಳನ್ನು ಕೊಂದು ತಿಂದಿದೆ. ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಕೊಲ್ಲುತ್ತಿರುವ ಹಿನ್ನೆಲೆಯಲ್ಲಿ ಜನರ ಮೇಲೂ ದಾಳಿ ಮಾಡುವ ಆತಂಕವಿದೆ.ಹೀಗಾಗಿಯೇ ಶ್ರಿಮಂಗಲ ಹಾಗೂ ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. 60 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಬಳಸಿ ಹಾಗೂ ದುಬಾರೆ ಸಾಕಾನೆ ಶಿಬಿರದ ಗೋಪಿ ಹಾಗೂ ಶ್ರೀರಾಮ ಆನೆಗಳ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಫಿ ತೋಟ ಮತ್ತು ಅರಣ್ಯದಂಚಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶ ದಟ್ಟಾರಣ್ಯವಾಗಿದ್ದು ಆನೆಗಳು ನುಗ್ಗುವುದು ಕಷ್ಟದ ಸ್ಥಿತಿ ಎನ್ನುವಂತ್ತಿದೆ. ಹೀಗಾಗಿ ಇಂತಹ ಅರಣ್ಯದ ಅಂಚಿನಲ್ಲಿ ಹುಲಿ ಕಾರ್ಯಚರಣೆ ದುಸ್ಥರವಾಗಿದೆ.

Oplus_131072