Breaking News

ಯಳಂದೂರು :ಹೆಬ್ಬಾವು ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ಮಹೇಶ್…

ಜಮೀನಿನಲ್ಲಿ ಬಾಳೆ ಕಟಾವು ಮಾಡುತ್ತಿದ್ದ ವೇಳೆ ಕಟಾವು ಮಾಡುತ್ತಿದ್ದ ವ್ಯಕ್ತಿ ಮಡಚಿಕೊಂಡು ಮಲಗಿದ್ದ ಹೆಬ್ಬಾವಿನ ಮೇಲೆ ಗೊತ್ತಿಲ್ಲದೆ ಕಾಲಿನಿಂದ ತುಳಿದಿದ್ದಾರೆ.ತಕ್ಷಣ ಎಚ್ಚತ್ತ ಇವರು ಹಾವು ಇರುವುದನ್ನು ಕಂಡು ಕೂಡಲೇ ತೋಟದ ಮಾಲೀಕ ರಾಜೇಶ್ ರವರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಇವರು ಉರಗ ತಜ್ಞ ಸಂತೆಮರಹಳ್ಳಿ ಸ್ನೇಕ್ ಮಹೇಶ್ ರವರಿಗೆ ಮೊಬೈಲ್ ಕರೆ ಮಾಡಿದ್ದಾರೆ. ತಕ್ಷಣ ಅರಣ್ಯ ಇಲಾಖೆಯವರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಹಾವನ್ನು ಸುರಕ್ಷಿತವಾಗಿ ಹಿಡಿದು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯಕ್ಕೆ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *