Breaking News

ಸತತ ಮಳೆಯಿಂದಾಗಿ ಧಾರವಾಡದಲ್ಲಿ ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ

ಧಾರವಾಡ: ನಗರದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 4 ಮಳೆಗೆ ಕೊಚ್ಚಿಹೋಗಿದ್ದು, ಧಾರವಾಡದ ರಮ್ಯ ರೆಸಿಡೆನ್ಸಿಯ ಬಳಿ ಈ ಘಟನೆ ಸಂಭವಿಸಿದೆ.
ಹುಬ್ಬಳ್ಳಿಯಿಂದ ಧಾರವಾಡದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕಾಮಗಾರಿ ಕಳಪೆ ಇರುವ ಕಾರಣಕ್ಕೆ, ಅಲ್ಲಲ್ಲಿ ಈ ಅವಘಡಗಳು ಸಂಭವಿಸುತ್ತಿದೆ. ಈ ಕಾರಣಕ್ಕೆ ವಾಹನ ಸವಾರರು ಪರದಾಡಿದ್ದಾರೆ ಕಳಪೆ ರಸ್ತೆ ಕಾಮಗಾರಿ ಮಾಡುವುದರಿಂದ, ಪ್ರತೀ ಬಾರಿ ಜೋರಾಗಿ ಮಳೆ ಬಂದಾಗ, ಈ ಕಷ್ಟವನ್ನು ಇಲ್ಲಿನ ಜನ ಅನುಭವಿಸಲೇಬೇಕಾದ ಪರಿಸ್ಥಿತಿ ಇದೆ.
ಇನ್ನೊಂದು ವಿಚಾರ ಅಂದ್ರೆ, ಈ ರಸ್ತೆಯಲ್ಲಿ ಟೋಲ್ ಇಲ್ಲದ ಕಾರಣಕ್ಕೆ ವಾಹನ ಸವಾರರು ಬೇಕಾದ ಹಾಗೆ ಪ್ರಯಾಣಿಸುತ್ತಿದ್ದಾರೆ. ಅಲ್ಲದೇ, ಈ ರಸ್ತೆಯಲ್ಲಿ ಪೊಲೀಸರು ಕೂಡ ಇಲ್ಲ ನಂದಿ ಹೈವೆ ಅವರು ಸದ್ಯ ಟೋಲ್ ಶುಲ್ಕವನ್ನ ಸ್ಥಗಿತ ಗೊಳಿಸಿದ ಹಿನ್ನೆಲೆ ವಾಹನ ಸವಾರರು ಮನಸ್ಸಿಗೆ ಬಂದಂತೆ ತಿರುಗಾಡುತ್ತಿದ್ದಾರೆ. ಹೀಗಾಗಿ ಅಪಘಾತಗಳು ಕೂಡ ಹೆಚ್ಚು ಸಂಭವಿಸುತ್ತಿದೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *