Breaking News

ಕಾಸರಗೋಡು : ಕಾರು-ಜೀಪು ಢಿಕ್ಕಿ, 10 ಮಂದಿಗೆ ಗಾಯ!!

ಪಾಣತ್ತೂರು ಮೈಲಾಟಿ ರಸ್ತೆ ಬಳಿಯ ಕಂಬಿಕಾನದಲ್ಲಿ ಕಾರು ಮತ್ತು ಜೀಪು ಢಿಕ್ಕಿ ಹೊಡೆದು ವಿದ್ಯಾರ್ಥಿಗಳ ಸಹಿತ 10 ಮಂದಿ ಗಾಯಗೊಂಡಿದ್ದಾರೆ. ರಾಣಿಪುರ ಪ್ರವಾಸಿ ಕೇಂದ್ರವನ್ನು ವೀಕ್ಷಿಸಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.ಜೀಪಿನಲ್ಲಿ ಸಂಚರಿಸುತ್ತಿದ್ದ ಪಾಣತ್ತೂರು ಸರಕಾರಿ ಹೈಸ್ಕೂಲ್‌ನ ವಿದ್ಯಾರ್ಥಿಗಳಾದ ಶಿವ ಕುಮಾರ್‌ (11), ಗೀತಾ (11), ಅರ್ಜುನ್‌ (6), ಅಮೃತ (12), ಲಯ (10), ಅದಿದೇವ್‌ (7), ಆರ್ಯಾ (15), ಶಿವನ್ಯ (9), ಕಾರು ಪ್ರಯಾಣಿಕರಾದ ಪುತ್ತೂರು ನಿವಾಸಿಗಳಾದ ಅಸ್ವಾಫ್‌ (21) ಮತ್ತು ನುಹ್‌ಮಾನ್‌ (21) ಗಾಯಗೊಂಡಿದ್ದು ವೆಳ್ಳರಿಕುಂಡು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *