ಮಳೆ ಅವಾಂತರ: ಮನೆಯ ಗೋಡೆ ಕುಸಿದು ಕುಟುಂಬ ಪ್ರಾಣಾಪಾಯದಿಂದ ಪಾರು ಬಾಲಕನಿಗೆ ಗಾಯ

ಮಳೆಯ ಅವಾಂತರದಿಂದ ಮನೆಯ ಗೋಡೆ ಕುಸಿದಿರುವುದು,

ಮೈಸೂರು: ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆಯ ಮಣ್ಣಿನ ಗೋಡೆ ಕುಸಿದು (wall collapse Due To Heavy Rain) ಬಿದ್ದು, ಬಾಲಕನ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ತಾಲೂಕಿನ ಗಣಿಗರ ಹುಂಡಿಯಲ್ಲಿ ನಡೆದಿದೆ. ಮೊಳೆ ಗ್ರಾಮದಲ್ಲಿಯೂ ಮನೆ ಬಿದ್ದ ಘಟನೆ ಜರುಗಿದೆ. ಗ್ರಾಮದ ಸಿದ್ದರಾಜು, ಜ್ಯೋತಿ ಎಂಬುವರ ಪುತ್ರ ವಿಕಾಸ್ (16)ಗಾಯಗೊಂಡ ಬಾಲಕ. ವಿಕಾಸ್​ನನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮನೆ ಕುಸಿತ: ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರು

ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನರಸೀಪುರ ತಾಲೂಕಿನ ಮೂಗೂರು ಮೋಳೆ ಗ್ರಾಮದಲ್ಲಿ ಮನೆ ಕುಸಿದು (house collapse Due To Heavy Rain) ಬಿದ್ದಿದೆ‌.

ಗ್ರಾಮದ ಮಹಾದೇವಶೆಟ್ಟಿ ಎಂಬುವರ ಮನೆ ಬಿದ್ದಿದ್ದು, ರಾತ್ರಿ ಮಲಗಿದ್ದ ವೇಳೆ ಮನೆ ಬೀಳುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಮನೆಯಲ್ಲಿದ್ದ 10 ಮಂದಿಯನ್ನ ಮಹದೇವಶೆಟ್ಟಿ ಆಚೆ ಕಳುಹಿಸಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಸುರಕ್ಷಿತವಾಗಿದ್ದಾರೆ. ಮನೆಯಲ್ಲಿದ್ದ ಅನೇಕ ವಸ್ತುಗಳು ನಾಶವಾಗಿದ್ದು, ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

Share News

About admin

Check Also

ವೃದ್ಧಾಪ್ಯದಲ್ಲಿ ಆಸರೆಯಾದ 65 ವರ್ಷದ ಮಹಿಳೆ : ಮೈಸೂರುಲ್ಲಿ ಅಪರೂಪದ ನಿಖಾ

ಮೈಸೂರು: ಪತ್ನಿಯನ್ನು ಕಳೆದುಕೊಂಡಿರುವ ಅಪ್ಪನಿಗೆ ವೃದ್ಧಾಪ್ಯದಲ್ಲಿ ಆಸರೆ ಬೇಕೆಂಬ ಕಾರಣಕ್ಕೆ ಮಕ್ಕಳು, ಮೊಮ್ಮಕ್ಕಳು ಸೇರಿ 85 ವರ್ಷದ ವೃದ್ಧನಿಗೆ65 ವರ್ಷದ ಮಹಿಳೆ …

Leave a Reply

Your email address will not be published. Required fields are marked *

You cannot copy content of this page