Breaking News

ʼಬಿಗ್‌ ಬಾಸ್‌ʼ ನಿರೂಪಣೆ ಮಾಡಲು ಖಡಕ್‌ ಕಂಡಿಷನ್ಸ್‌!!

ಕಳೆದ ಬಿಗ್‌ ಬಾಸ್‌ ಸೀಸನ್‌ ದೊಡ್ಡದಾಗಿ ಸದ್ದು ಮಾಡಿತ್ತು. ದೊಡ್ಮನೆ ಆಟ ಮನೆಯೊಳಗೆ ಮಾತ್ರವಲ್ಲದೆ, ಹೊರಗೂ ಸುದ್ದಿಯಾಗಿತ್ತು.ʼಬಿಗ್‌ ಬಾಸ್‌ ಸೀಸನ್‌ -12ʼಕ್ಕೆ ನಿರೂಪಕರಾಗಿ ಕಿಚ್ಚ ಸುದೀಪ್‌ ಅವರೇ ಮುಂದುವರೆಯುತ್ತಾರಂತೆ ಎನ್ನುವ ಮಾತು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದೆ. ಮೂಲಗಳ ಪ್ರಕಾರ ಆಯೋಜಕರು ಕಿಚ್ಚ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುದೀಪ್‌ ಅವರು ಕೆಲವು ಕಂಡಿಷನ್ಸ್‌ಗಳನ್ನು ಹಾಕಿದ್ದು, ಆ ಕಂಡಿಷನ್ಸ್‌ಗಳನ್ನು ಆಯೋಜಕರು ಒಪ್ಪಿದರೆ ಖಂಡಿತ ಸುದೀಪ್‌ ಅವರೇ ಮುಂದಿನ ಸೀಸನ್‌ಗೆ ಹೋಸ್ಟ್‌ ಆಗಿ ಬರುತ್ತಾರೆ ಎನ್ನಲಾಗುತ್ತಿದೆ.ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಕನ್ನಡ ಬಿಗ್‌ ಬಾಸ್‌ನಲ್ಲಿ ಕನ್ನಡವೇ ವೇದಘೋಷ ಆಗಬೇಕು.ಒಳ್ಳೆಯ ಲೀಗಲ್‌ ಟೀಮ್‌ ಇರಬೇಕು. ವಿವಾದಿತ ಸ್ಪರ್ಧಿಗಳನ್ನು ಆರಿಸಬಾರದು.ಈ ಕಂಡಿಷನ್ಸ್‌ಗಳನ್ನು ಕಿಚ್ಚ ಅವರು ಹಾಕಿದ್ದಾರೆ ಎನ್ನಲಾಗಿದ್ದು, ಓಕೆ ಆದರೆ ʼಬಿಗ್‌ ಬಾಸ್‌ -12ʼಗೆ ಕಿಚ್ಚ ಅವರೇ ಹೋಸ್ಟ್‌ ಆಗುತ್ತಾರೆ ಎನ್ನಲಾಗುತ್ತಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *