ಬೆಂಗಳೂರು: ಸಿಎಂ ಕುಮಾರಸ್ವಾಮಿ ಮಂಡಿಸಲಿರುವ ಮೈತ್ರಿ ಸರ್ಕಾರದ ಎರಡನೇ ಬಜೆಟ್ಗೆ ಕೌಂಟ್ಡೌನ್ ಶುರುವಾಗಿದೆ. ಕಣ್ಣೆದುರಲ್ಲೇ ಲೋಕಸಭಾ ಚುನಾವಣೆಯಿರೋದ್ರಿಂದ ಜನಪರ ಹಾಗೂ ರೈತಪರ ಬಜೆಟ್ ನಿರೀಕ್ಷೆಯಂತೂ ಇದೆ. ರಾಹುಕಾಲ ಮುಕ್ತಾಯದ ಬಳಿಕ ಮಧ್ಯಾಹ್ನ 12.30ಕ್ಕೆ ಆಯವ್ಯಯ ಮಂಡಿಸಲಿದ್ದಾರೆ.ಬಜೆಟ್ ಮೇಲಿನ ನಿರೀಕ್ಷೆಗಳೇನು..?ಬಜೆಟ್ನಲ್ಲಿ ರೈತರಿಗೆ ಬಂಪರ್ ಆಫರ್ ನೀಡುವ ಸಾಧ್ಯತೆ ದಟ್ಟವಾಗಿದೆ. ಕಳೆದ ಬಜೆಟ್ನಲ್ಲಿ ಘೋಷಣೆಯಾಗಿರುವ ಸಾಲಮನ್ನಾ ಯೋಜನೆಗೆ ಹೆಚ್ಚಿನ ಹಣ ನಿಗದಿಪಡಿಸುವ ನಿರೀಕ್ಷೆಯಿದೆ. ಜೊತೆಗೆ ಬೆಂಬಲ ಬೆಲೆ, ಮಾರುಕಟ್ಟೆ ಖಾತರಿ ಯೋಜನೆ, ವಾಣಿಜ್ಯ, ಸಿರಿಧಾನ್ಯಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗುವ ಸಾಧ್ಯತೆ ಇದೆ. ಅಲ್ಲದೇ ಮಹದಾಯಿ, ಕಳಸಾ -ಬಂಡೂರಿ ಯೋಜನೆಗೆ ಅನುಷ್ಠಾನ ಘೋಷಣೆಯಾಗುವ ನಿರೀಕ್ಷೆ ಇದೆ. ಇನ್ನೂ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆ ಬದಲಿಗೆ ಯಶಸ್ವಿನಿ ಯೋಜನೆ ಮರು ಜಾರಿಗೆ ತರಲು ಮೈತ್ರಿ ಸರ್ಕಾರ ನಿರ್ಧರಿಸಿದೆ. ಅಲ್ಲದೇ ಪ್ರಾಥಮಿಕ ಆರೋಗ್ಯ ಸೇವೆಗೆ ಹೆಚ್ಚಿನ ಅನುದಾನ ಸಿಗುವ ನೀರಿಕ್ಷೆಯಿದೆ. ಇನ್ನೂ ತಂಬಾಕಿಗೆ ಹೆಚ್ಚಿನ ತೆರಿಗೆ ವಿಧಿಸಿ ಅದೇ ಹಣವನ್ನ ತಂಬಾಕಿನಿಂದ ಬಾಧಿತರಾದವರ ಚಿಕಿತ್ಸೆಗೆ ಮೀಸಲಿಡಲು ಸರ್ಕಾರದ ಚಿಂತನೆಯಿದೆ. ಇನ್ನೂ ಪ್ರವಾಹದಿಂದ ಸಂಕಷ್ಟದಲ್ಲಿರುವ ಕೊಡಗು ಪುನರ್ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆಯೂ ಇದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





