Breaking News

ಕಂದಕಕ್ಕೆ ಉರುಳಿದ ಬಸ್, ಐವರು ಭಾರತೀಯರು ಸಾವು, 27 ಜನರಿಗೆ ಗಾಯ!

ಕತಾರ್ ನಲ್ಲಿರುವ ಭಾರತೀಯ ರಾಯಭಾರಿಕಛೇರಿಯ ವರದಿಯ ಪ್ರಕಾರ, ರಜೆಯ ಪ್ರಯುಕ್ತ 28 ಜನ ಭಾರತೀಯರಿದ್ದ ಬಸ್ ವೊಂದು ಕೀನ್ಯಾಗೆ ಪ್ರವಾಸ ಕೈಗೊಂಡಿದ್ದರು.ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿದೆ.
ಪರಿಣಾಮ ಕೇರಳ ಮೂಲದ 5 ಜನ ಸಾವನ್ನಪ್ಪಿದ್ದರೆ, ಬಸ್ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಸೇರಿದಂತೆ 27 ಜನ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, 27 ಜನರ ಪೈಕಿ ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನಲೆ ಅವರನ್ನು ನೈರೋಬಿಯದ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಎಂದು ವರದಿಯಾಗಿದೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *