Breaking News

ಕಾರು ತೆರವುಗೊಳಿಸುತ್ತಿದ್ದ ವೇಳೆ ಮುಖ್ಯಪೇದೆಗೆ ಲಾರಿ ಡಿಕ್ಕಿ,ಸಾವು!

ಗುರುವಾರ ಲಿಂಗರಾಜು ಹಾಗೂ ಮಲ್ಲೇಶ್-ಮುಖ್ಯ ಪೇದೆಗಳು 112 ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 75ರ ಶೆಟ್ಟಿಹಳ್ಳಿ ಯೂಟರ್ನ್ ಬಳಿ ಯಾರೋ ಅಪರಿಚಿತ ವ್ಯಕ್ತಿಗಳು ಕಾರನ್ನು ರಸ್ತೆಯಲ್ಲಿ ನಿಲ್ಲಿಸಿದರು.ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದನ್ನು ಗಮನಿಸಿದ ಮುಖ್ಯಪೇದೆ ಲಿಂಗರಾಜು ಕಾರು ಚಾಲಕನಿಗೆ ಕಾರು ತೆರವುಗೊಳಿಸುವಂತೆ ಸೂಚಿಸಿದರು. ಬಳಿಕ 112 ವಾಹನ ಬಳಿ ಬರುತ್ತಿದ್ದ ಸಂದರ್ಭ ಲಿಂಗರಾಜು ಅವರಿಗೆ ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಲಿಂಗರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ವಿಚಾರ ತಿಳಿದ ತಕ್ಷಣ ವೃತ್ತ ನಿರೀಕ್ಷಕರಾದ ಎಸ್.ಬಿ.ನವೀನ್‌ಗೌಡ, ಮಾದ್ಯಾ ನಾಯ್ಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *