ಇಟಲಿಯ ಉತ್ತರ ಭಾಗದ ಕೊಮೊ ಎಂಬ ಊರಿನಲ್ಲಿ ವಾಸವಿದ್ದ, ತನ್ನ ಮನೆಯಿಂದ ಸುಮಾರು 450 ಕಿಮೀ ದೂರದ ಫಾನೊ ಎಂಬ ಕರಾವಳಿ ಪಟ್ಟಣವರೆಗೆ ಪಾದಯಾತ್ರೆ ನಡೆಸಿದ್ದಾನೆ. ಅವನ ದೀರ್ಘ ನಡಿಗೆ 7 ದಿನಗಳವರೆಗೆ ಮುಂದುವರೆದಿದ್ದು, ಪ್ರತಿದಿನ ಸರಾಸರಿ 60 ಕಿಮೀ ನಡೆಯುತ್ತಿದ್ದ.ಘಟನೆ ವೈರಲ್ ಆದ ಬಳಿಕ, ನೆಟಿಜನ್‌ಗಳು ಆ ವ್ಯಕ್ತಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ. “ಅವನಿಗೆ ದಂಡವಲ್ಲ, ಒಂದು ಜೋಡಿ ಶೂಗಳನ್ನು ಬಹುಮಾನವಾಗಿ ಕೊಡಬೇಕಿತ್ತು!” “ಅವನನ್ನು ಕೊಂಡಾಡಬೇಕು. ತನ್ನ ಕೋಪವನ್ನು ಹಿಂಸಾಚಾರವಿಲ್ಲದೇ ಹೊರಹಾಕಿದ್ದಾನೆ” ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.ಈ ನಡುವೆ, ಆ ಸಮಯದಲ್ಲಿ ಇಟಲಿ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿಗೊಳಿಸಿರುವುದರಿಂದ, ಈ ನಡಿಗೆ ಕಾನೂನು ಉಲ್ಲಂಘನೆಯಾಗಿದ್ದು, ಸರ್ಕಾರದಿಂದ ದಂಡ ವಿಧಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

