ಹುಬ್ಬಳ್ಳಿ: ಠಾಣೆ ಎದುರು ಸುತ್ತಮುತ್ತ ಬಿದ್ದಿರುವ ಕಲ್ಲಿನ ರಾಶಿಗಳನ್ನು ಪಾಲಕೆಯ ಪೌರ ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದಾರೆ. ಗಲಭೆಕೋರರು ಮೊದಲೇ ಸಂಚು ರೂಪಿಸಿ ರಾಶಿ ಕಲ್ಲು ತಂದಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ.ಏ.20ರವರೆಗೆ ನಗರದಾದ್ಯಂತ ಸಿಆರ್ ಪಿಸಿ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಲಾಭೂರಾಮ ಆದೇಶ ಹೊರಡಿಸಿದ್ದಾರೆ.
ಗಲಭೆ ನಿಯಂತ್ರಿಸುವ ಉದ್ದೇಶದಿಂದ ನಗರದಾದ್ಯಂತ ನಾಲ್ಕು ದಿನ ಏ.16 ರಾತ್ರಿಯಿಂದ ಏ.20ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಗಲಭೆಕೋರರ ಬಂಧನಕ್ಕೆ ಪೊಲೀಸ್ ಆಯುಕ್ತರು 8 ತಂಡ ರಚಿಸಿದ್ದಾರೆ. ಸದ್ಯ ಗಲಭೆಗೆ ಕಾರಣರಾದ ಹತ್ತಕ್ಕೂ ಹೆಚ್ಚು ಜನರನ್ನು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ನಗರದೆಲ್ಲೆಡೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

