Breaking News

ಎಟಿಎಂದಲ್ಲಿ ಹಣ ಡ್ರಾ ಮಾಡುವ ಹಿನ್ನೆಲೆಯಲ್ಲಿ ವ್ಯಕ್ತಿಗಳಿಬ್ಬರ ಹೊಡೆದಾಟ

ಹುಬ್ಬಳ್ಳಿ: ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಸಂಬಂಧಿಸಿದಂತೆ ವ್ಯಕ್ತಿಗಳಿಬ್ಬರು ಪರಸ್ಪರ ಹೊಡೆದಾಡುತ್ತಿರುವ ಘಟನೆ ನಗರದ ಚನ್ನಮ್ಮ ವೃತ್ತದ ಬಳಿ ಇರುವ ಎಕ್ಸಿಸ್ ಬ್ಯಾಂಕ್ ಏಟಿಎಂ ಬಳಿ ಇಂದು ಮಧ್ಯಾಹ್ನ ನಡೆದಿದೆ.ಎಟಿಎಂನಿಂದ ಹಣ ಡ್ರಾಮಾಡಲು ಸರದಿಯಲ್ಲಿ ನಿಲ್ಲುವ ಕುರಿತಂತೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಬಳಿಕ ಇಬ್ಬರಲ್ಲಿ ಪರಸ್ಪರ ಹೊಡೆದಾಟ ನಡೆದಿದೆ. ಸರದಿ ಸಾಲಿನಲ್ಲಿ ನಿಲ್ಲುವ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.‌ ಎಟಿಎಂನಲ್ಲಿ ವ್ಯವಸ್ಥಿತ ಭದ್ರತೆ ಹಾಗೂ ಭದ್ರತಾ ಸಿಬ್ಬಂದಿಗಳ ಕೊರತೆಯಿಂದ ಈ ಘಟನೆ ಸಂಬವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Share News

About admin

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *