ಕಲಬುರಗಿಯ ಹೊರವಲಯದ ಪಟ್ಟಣ ಗ್ರಾಮದ ಬಳಿಯ ಡ್ರೈವರ್ ಡಾಬಾದಲ್ಲಿ ನಡೆದ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಲೆಯ ಅಸಲಿ ಕಥೆ ಬಯಲು ಮಾಡಿದ್ದಾರೆ. ಕಳೆದ ವರ್ಷ ಕೊಲೆಯಾದ ರೌಡಿ ಶೀಟರ್ ಸೋಮನ ಪತ್ನಿಯ ಶಪಥವೇ ಕೊಲೆಗೆ ಕಾರಣ ಎನ್ನುವುದು ಗೊತ್ತಾಗಿದೆ.ಗಂಡನ ಕೊಲೆಗೆ ಪ್ರತಿಕಾರ ತೆಗೆದುಕೊಳ್ಳುವವರೆಗೂ ತನ್ನ ಕೊರಳಲ್ಲಿದ್ದ ಮಾಂಗಲ್ಯ ಸೂತ್ರ ತೆಗೆಯುವದಿಲ್ಲ ಎಂದು ಗಂಡನ ಶವದ ಮುಂದೆ ಶಪಥ ಮಾಡಿದ್ದಳಂತೆ. ಆಕೆಯ ಶಪಥವೇ ತ್ರಿವಳಿ ಕೊಲೆಗೆ ಮುಖ್ಯ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

