ರಾಯಚೂರು: ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವ, ಇಂದಿನಿಂದ ಮಳೆಯ ಆತಂಕದ ಮಧ್ಯೆಯೂ ಮಂತ್ರಾಲಯದಲ್ಲಿ ಆರಂಭಗೊಂಡಿದೆ.
ಮಂತ್ರಾಲಯದಲ್ಲಿ ಇಂದಿನಿಂದ ಆರಂಭಗೊಳ್ಳುತ್ತಿರುವಂತ ಸಪ್ತರಾತ್ರೋತ್ಸವಕ್ಕೆ ದೇಶ, ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸೋ ಹಿನ್ನಲೆಯಲ್ಲಿ, ಸಕಲ ಸೌಲಭ್ಯದ ವ್ಯವಸ್ಥೆ ಕೂಡ ಮಾಡಲಾಗಿದೆ.ಆಗಸ್ಟ್ 10ರ ಇಂದು ಸಂಜೆ 7ಕ್ಕೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಧ್ವಜಾರೋಹಣ, ಗೋ, ಧಾನ್ಯ ಪೂಜೆ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನದ ಮೂಲಕ ಇಂದಿನಿಂದ ಶ್ರೀರಾಯರ 351ನೇ ಆರಾಧನೆಯ ಸಪ್ತ ರಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





