Breaking News

ಹುಬ್ಬಳ್ಳಿ :ಬಸ್‌ಗಳ ನಡುವೆ ಅಪಘಾತ, ಚಾಲಕರಿಗೆ ಹಾರ ಹಾಕಿ ಅವಮಾನ ಮಾಡಿದ ಅಧಿಕಾರಿಗಳು!

ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ ಹುಬ್ಬಳ್ಳಿ ಘಟಕಕ್ಕೆ ಸೇರಿದ ಬಸ್‌ಗಳು ಸರಿಯಾಗಿ ಬ್ರೇಕ್‌ ಹಿಡಿಯದ ಕಾರಣ ಒಂದು ಚಿಗರಿ ಬಸ್‌ ಇನ್ನೊಂದು ಚಿಗರಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಟೋಲ್‌ ನಾಕಾ ಹತ್ತಿರ ಸಣ್ಣ ಅಪಘಾತವಾಗಿದೆ.ಚಾಲಕರನ್ನ ಕಚೇರಿಗೆ ಕರೆಸಿಕೊಂಡಿರುವ ಡಿಸಿ ಸಿದ್ದಲ್ಲಿಂಗೇಶ್‌ ಹಾಗೂ ಡಿಇಎಂ ಪ್ರವೀಣ್‌ ಅವರು ಇಬ್ಬರಿಗೂ ಹಾರ ಹಾಕಿ ಫೋಟೋ ತೆಗೆದಿದ್ದಾರೆ. ಇದಿಷ್ಟೇ ಅಲ್ಲದೇ, ಆ ಫೋಟೋಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಸಹ ಹಾಕಿದ್ದು, ಇದರಿಂದ ಅವರಿಗೆ ಅವಮಾನವಾಗಿದೆ. ಅಧಿಕಾರಿಗಳು ತಮ್ಮ ತಪ್ಪನ್ನ ಮುಚ್ಚಿ ಹಾಕಲು ಈ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ.ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *