ಪೂಜಾ ತನ್ನ ಪತಿ ಮೃತಪಟ್ಟ ಬಳಿಕ ಅವರ ಇಬ್ಬರು ಸಹೋದರರ ಜತೆ ಅಕ್ರಮ ಸಂಬಂಧದಲ್ಲಿದ್ದಳು. ಜತೆಗೆ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ್ದಳು. ಆಕೆಯ ಜತೆ ಆಕೆಯ ಸಹೋದರಿಯ ಪ್ರಿಯಕರ ಅನಿಲ್ ವರ್ಮಾ ಕೂಡ ಇದ್ದರು. ಕದ್ದ ಆಭರಣಗಳನ್ನು ಸಂಬಂಧಿಕರೊಬ್ಬರಿಗೆ ಮಾರಾಟ ಮಾಡಲು ಅನಿಲ್ ವರ್ಮಾ ತೆರಳುತ್ತಿದ್ದಾಗ ಪೊಲೀಸರು ಅಲ್ಲಿಗೆ ಹೋಗಿದ್ದಾರೆ. ವರ್ಮಾ ಪೊಲೀಸರ ಮೇಲೆ ಗುಂಡು ಹಾರಿಸಿದ್ದ, ಹೀಗಾಗಿ ಪೊಲೀಸರು ಕೂಡ ಅತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.ಝಾನ್ಸಿಯಲ್ಲಿ ನಡೆದ ಮಹಿಳೆ ಕೊಲೆ ಹಾಗೂ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಝಾನ್ಸಿಯಲ್ಲಿ 54 ವರ್ಷದ ಮಹಿಳೆಯ ಕೊಲೆ ನಡೆದಿತ್ತು. ಜತೆಗೆ ಮನೆಯಲ್ಲಿದ್ದ ಚಿನ್ನಾಭರಣವೆಲ್ಲಾ ಕಳ್ಳತನವಾಗಿತ್ತು.ಮೃತ ಮಹಿಳೆಯ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

