ಗೂಡ್ಸ್ ವಾಹನ ಚಾಲಕ ಸಾವು ಗೂಡ್ಸ್ ವಾಹನ ಚಾಲಕರೊಬ್ಬರು ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.ಅಶೋಕ್ ಜೀರಿಗವಾಡ (48) ಮೃತ ದುರ್ದೈವಿ. ಮೃತ ಅಶೋಕ್ ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ನಿವಾಸಿ. ದಾವಣಗೆರೆಯಲ್ಲಿ ಹೃದಯಾಘಾತದಿಂದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ ಅಕ್ಷಯ್ ಮೃತಪಟ್ಟವರು. ಧಾರವಾಡದಲ್ಲಿ 25 ವರ್ಷದ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುರೋಹಿತ ನಗರದ ಜೀವಿಯಾ ಕುಸಗೂರು ಹಾರ್ಟ್ ಅಟ್ಯಾಕ್ ಗೆ ಬಲಿಯಾಗಿದ್ದಾರೆ.ಕನಕಪುರ ತಾಲೂಕಿನ ಕೊಗ್ಗೆ ದೊಡ್ಡಿ ಗ್ರಾಮದ 38 ವರ್ಷದ ಮಾದೇಶ್ ನಾಯ್ಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಾದೇಶ್ ನಾಯ್ಕ್ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

