ಐವಿಎಫ್ ತಂತ್ರಜ್ಞಾನದ ಮೂಲಕ ಮಕ್ಕಳ ಪಡೆಯಲು ಮುಂದಾಗಿರುವ ನಟಿ ಭಾವನಾ ಅವರು, ಐವಿಎಫ್ ಪ್ರಕ್ರಿಯೆ ವೇಳೆ ದಾನಿಯ ಆಯ್ಕೆ ಹೇಗೆ ನಡೆಯುತ್ತದೆ? ದಾನಿಯನ್ನ ಭಾವನಾ ಖುದ್ದಾಗಿ ಆಯ್ಕೆ ಮಾಡಿಕೊಂಡ್ರಾ? ದಾನಿಗಳಿಗೆ ಇರುವ ನಿಯಮಗಳೇನು? ಈ ಬಗ್ಗೆ ಭಾವನಾ ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮದುವೆಯಾಗದೆ, ಸಂಗಾತಿ ಇಲ್ಲದೆ, ಐವಿಎಫ್ ಮುಖಾಂತರ ಭಾವನಾ ರಾಮಣ್ಣ ಗರ್ಭ ಧರಿಸಿದ್ದಾರೆ. ಈಗಾಗಲೇ ನಟಿ ಭಾವನಾ ಅವರಿಗೆ ಆರು ತಿಂಗಳು ತುಂಬು ಗರ್ಭಿಣಿಯಾಗಿದ್ದಾರೆ. ವೈದ್ಯರುಹೇಳಿದ ಡೋನರ್ ಅನ್ನು ಒಪ್ಪಿಕೊಂಡೆ. ಆದರೆ ನಾನು ದಕ್ಷಿಣ ಭಾರತದ ಡೋನರ್ ಬೇಕು ಎಂದಿದ್ದೆ. ನಾನು ದೆಹಲಿಗೆ ಹೋಗಿ ಚಿಕಿತ್ಸೆ ಪಡೆದಿದ್ದರೆ ಉತ್ತರ ಭಾರತದ ಡೋನರ್ ಸಿಗುವ ಸಾಧ್ಯತೆಯಿತ್ತು. ಆಹಾರ ಶೈಲಿ, ಜೀನ್ಸ್, ಡಿಎನ್‌ಎ ಎಲ್ಲಾ ಒಂದೇ ತರ ಇರುತ್ತದೆ ಎನ್ನುವ ಕಾರಣಕ್ಕೆ ನಾನು ದಕ್ಷಿಣದವರು ಬೇಕು ಎಂದಿದ್ದೆ. ಇನ್ನುಳಿದಂತೆ ನಾನು ಏನು ಕೇಳಲಿಲ್ಲ. ಈಗ ದೊಡ್ಡ ದೊಡ್ಡ ಆಸ್ಪತ್ರೆ ಬ್ರ್ಯಾಂಡ್‌ಗಳಿವೆ. ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ನಟಿ ಭಾವನಾ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

