Breaking News

ಪತ್ನಿಯನ್ನ ಕೊಲೆ ಮಾಡಿದ್ದ ಪತಿರಾಯ!!

ಕೊಲೆ ಯತ್ನದ ಬಗ್ಗೆ ಕೋರ್ಟ್ ನಲ್ಲಿ ಸಾಕ್ಷಿ ಹೇಳುತ್ತಾಳೆ ಎಂದು ಪತಿಯೋರ್ವ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ದಾರುಣ ಘಟನೆ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಸುಮಾರು 11 ವರ್ಷಗಳಿಂದ ಪತಿಯಿಂದ ದೂರವಾಗಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದ ಜಮುನಾ ಪತಿಯ ವಿರುದ್ಧ ಕೊಲೆಗೆ ಯತ್ನಿಸಿರುವ ಬಗ್ಗೆ ದೂರು ದಾಖಲಿಸಿದ್ದಳು. ಈ ಸಂಬಂಧ 11 ವರ್ಷದ ಕೇಸ್ ವಾಪಸ್ ಪಡೆಯುವಂತೆ ಪತಿ ಗುರುಮೂರ್ತಿ ಒತ್ತಾಯಿಸುತ್ತಿದ್ದ, ಪತಿಯ ಮಾತಿಗೆ ಬಗ್ಗದ ಪತ್ನಿ ಕೋರ್ಟ್ ಅಲ್ಲಿ ನಿನ್ನ ಬಗ್ಗೆ ಹೇಳಿ ನಿನಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಳು. ಇದರಿಂದ ಸಿಟ್ಟಾದ ಪತಿ ಗುರುಮೂರ್ತಿ ಕಳೆದ ಮೂರು ದಿನಗಳ ಹಿಂದೆ ಪತ್ನಿ ಜಮುನಾ ಕಾಲು ಚೈನು ಖರೀದಿಗೆ ಚಿನ್ನದ ಅಂಗಡಿಗೆ ಬಂದಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಚಲನವಲನ ಗಮನಿಸಿ ಪ್ಲಾನ್ ಮಾಡಿ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಪರಾರಿಯಾಗಿದ್ದಾನೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *