ಆಸ್ಪತ್ರೆಯ ಐಸಿಯು ವಾರ್ಡ್‌ಗೆ ಅಪರಾಧಿಗಳು ಹೋಗುತ್ತಿರುವ ಸಿಸಿಟಿವಿ ಕ್ಯಾಮೆರದ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಇದರಲ್ಲಿ 5 ಅಪರಾಧಿಗಳು ಕೈಯಲ್ಲಿ ಪಿಸ್ತೂಲುಗಳನ್ನ ಹಿಡಿದುಕೊಂಡು, ಯಾವುದೇ ಭಯ ಇಲ್ಲದೇ ಐಸಿಯು ಕಡೆ ಹೋಗುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ. ಚಂದನ್ ಮಿಶ್ರಾ ಎನ್ನುವ ಬಕ್ಸಾರ್‌ನ ಕುಖ್ಯಾತ ಅಪರಾಧಿಯನ್ನ ಪರಾಸ್ ಆಸ್ಪತ್ರೆಯ ಐಸಿಯುನಲ್ಲಿ ಆಡ್ಮಿಟ್ ಮಾಡಲಾಗಿತ್ತು. ಈ ಸಮಯದಲ್ಲಿ ಆಸ್ಪತ್ರೆಗೆ ಬಂದ 5 ಜನ ಆಗಂತುಕರು ಐಸಿಯುನಲ್ಲಿದ್ದ ಚಂದನ್ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ.ಚಂದನ್‌ನನ್ನು ಈ ಹಿಂದೆ ಬಕ್ಸಾರ್‌ನಿಂದ ಭಾಗಲ್ಪುರ ಜೈಲಿಗೆ ವರ್ಗಾಯಿಸಲಾಗಿತ್ತು ಮತ್ತು ಚಿಕಿತ್ಸೆಗಾಗಿ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ದಾಳಿ ಮಾಡಿದವರನ್ನ ಪತ್ತೆ ಹಚ್ಚಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

