Breaking News

ಸಕಲೇಶಪುರ: ವಿದ್ಯುತ್ ಆಘಾತ, ಕಾಡಾನೆ ಸಾವು!!

ವಿದ್ಯುತ್ ಕಂಬದಿಂದ ಎರಡು ಅಡಿ ದೂರದಲ್ಲಿ ಆನೆ ಮೃತಪಟ್ಟಿದೆ. ರಸ್ತೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದು ಆನೆ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.ಆದರೆ, ಮರದಲ್ಲಿ ತುಂಡಾಗಿದ್ದ ವಿದ್ಯುತ್ ತಂತಿ, ಆನೆಯ ಸೊಂಡಿಲಿಗೆ ತಾಗಿದ್ದು, ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾಗಿ ಆನೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.18-20 ವರ್ಷದ ಆನೆ ಇದಾಗಿದ್ದು, ಎರಡೂ ದಂತಗಳಿವೆ. ಆನೆ ಸಾವಿನ ಸುದ್ದಿ ಕೇಳಿ ಮಹಿಳೆಯರು, ಮಕ್ಕಳು ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದರು.ಸ್ಥಳಕ್ಕೆ ಎಸಿಎಫ್‌ ಮಧುಸೂದನ್‌, ಆರ್‌ಎಫ್‌ಒ ಹೇಮಂತ್‌ಕುಮಾರ್‌, ಅರಣ್ಯ ಇಲಾಖೆ, ಸೆಸ್ಕ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *