ಯದರೂರು ಗ್ರಾಮದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ವಿಚಾರವಾಗಿ ಶುಕ್ರವಾರ ಭೂಸ್ವಾಧೀನ ಅಧಿಕಾರಿಗಳು ಹಾಗೂ ರೈತರೊಂದಿಗಿನ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.ಈ ಹಿಂದೆ ನಡೆದ ಸಭೆಯಲ್ಲಿ ಭೂಮಿ ಕೊಡುವುದಿಲ್ಲ ಎಂಬುದಾಗಿ ರೈತರು ಬರೆದುಕೊಟ್ಟಿದ್ದಾರೆ. ಈಗಲೂ ಅದೇ ರೀತಿ ಬರೆದುಕೊಟ್ಟಿದ್ದಾರೆ’ ಎಂದರು.
‘ಕೈಗಾರಿಕಾ ವಲಯ ಸ್ಥಾಪಿಸಲು 1,044 ಎಕರೆ ಸರ್ವೇ ಭೂಮಿಯನ್ನು ವಶಕ್ಕೆ ಪಡೆಯಲು ತೀರ್ಮಾನಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ. ಭೂಸ್ವಾಧೀನ ಮಾಡಿಕೊಳ್ಳಲು ನೋಟಿಸ್ ಕೂಡ ನೀಡಿದೆ. ನೋಟಿಸ್ ಬಂದಿರುವ ರೈತರನ್ನು ನಾನೂ ಮಾತನಾಡಿಸಿದ್ದೇನೆ. ಭೂಮಿಯನ್ನು ಕೊಡುವುದಾಗಿ ಹೇಳುವ ಯಾವೊಬ್ಬ ರೈತರೂ ಸ್ಥಳಕ್ಕೆ ಬಂದಿಲ್ಲ. ನನ್ನ ಬಳಿ ಬಂದ 79 ರೈತರು ತನಗೆ ಕೇವಲ 3 ಗುಂಟೆ ಇದೆ, 6 ಗುಂಟೆ ಇದೆ, 1 ಎಕರೆ ಜಮೀನು ಇದೆ ಎಂದು ಹೇಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ತಮ್ಮ ಭೂಮಿ ಕೊಡುವುದಿಲ್ಲ ಎಂದಿದ್ದಾರೆ. ಇಲ್ಲಿ ಸಣ್ಣ ರೈತರೇ ಹೆಚ್ಚಾಗಿದ್ದಾರೆ. ಆದರೆ, ಇಲ್ಲಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ಹೋಗಿ ಅಧಿಸೂಚನೆ ಆಗಿದೆ’ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

