Breaking News

ಅಮ್ಮನ ಅವಮಾನಿಸಿದಕ್ಕೆ ಸೇಡು: 10 ವರ್ಷಗಳ ನಂತರ ಎಳನೀರು ವ್ಯಾಪಾರಿ ಕತೆ ಮುಗಿಸಿದ ಮಗ

ತನ್ನ ತಾಯಿಯನ್ನು ಥಳಿಸಿ ಅವಮಾನಿಸಿದ ವ್ಯಕ್ತಿಯೊಬ್ಬನನ್ನು ಯುವಕನೋರ್ವ 10 ವರ್ಷಗಳ ನಂತರ ಕೊನೆಗೂ ಹೊಂಚು ಹಾಕಿ ಆತನ ಕತೆ ಮುಗಿಸಿದ್ದಾನೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.ಎಳನೀರು ವ್ಯಾಪಾರಿ ಮನೋಜ್ ಕೊಲೆಯ ಬಳಿಕ ಸೋನು ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿದ್ದಾನೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾನೆ. ಈ ಪೋಸ್ಟ್ ಈಗ ಈತ ಹಾಗೂ ಈತನಿಗೆ ಸಹಾಯ ಮಾಡಿದವರನ್ನು ಕಂಬಿ ಹಿಂದೆ ಕೂರಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೋನು, ರಂಜಿತ್, ಅದಿಲ್, ಸಲಮು ಹಾಗೂ ರೆಹ್ಮತ್ ಅಲಿ ಅವರನ್ನು ಬಂಧಿಸಿದ್ದಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *