Breaking News

ದಾವಣಗೆರೆಯಲ್ಲಿ ಬೃಹತ್ ‘ಖೋಟಾ ನೋಟು’ ಜಾಲ ಪತ್ತೆ, ನಾಲ್ವರು ಆರೋಪಿಗಳು ಅರೆಸ್ಟ್.!

ದಾವಣಗೆರೆಯಲ್ಲಿ ಖೋಟಾ ನೋಟು ಜಾಲ ಪತ್ತೆಯಾಗಿದ್ದು, ನಾಲ್ವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಕುಬೇರಪ್ಪ, ಸಂತೋಷ್ ಕುಮಾರ್, ವೀರೇಶ್, ಹನುಮಂತಪ್ಪ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಬೈಕ್ ಹಾಗೂ ಖೋಟಾ ನೋಟು ವಶಕ್ಕೆ ಪಡೆಯಲಾಗಿದೆ.ಜೈಲಿನಿಂದ ರಿಲೀಸ್ ಆಗಿದ್ದ ಆರೋಪಿ ಕುಬೇರಪ್ಪ ಎಂಬಾತ ಈ ದಂಧೆ ನಡೆಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹರಿಹರ, ಹೊಸಪೇಟೆ ಸೇರಿದಂತೆ ಹಲವು ಕಡೆಗೆ ಇಲ್ಲಿಂದ ಖೋಟಾ ನೋಟು ಸಪ್ಲೈ ಆಗುತ್ತಿತ್ತು ಎನ್ನಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *