Breaking News

ಹಾಸ್ಯದ ಸುತ್ತ ಸೋಮೇಶ್ವರದ ‘ಸುಲೋಚನಾ’ ಪಯಣ

ಸ್ಥಳೀಯ ಭಾಷೆ ಮತ್ತು ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಹೆಚ್ಚಾಗಿ ಸಿನಿಮಾ ಮಾಡುವ ರಾಜ್ ಬಿ ಶೆಟ್ಟಿ ಈ ಬಾರಿ ‘ಸು ಫ್ರಂ ಸೋ’ ಎನ್ನುವ ಭಿನ್ನ ಕಂಟೆಂಟ್ ನೊಂದಿಗೆ ಮತ್ತೊಮ್ಮೆ ಥಿಯೇಟರ್ ಗೆ ಬಂದಿದ್ದಾರೆ.ತನ್ನ ಮೊದಲ ಸಿನಿಮಾದಲ್ಲಿ ಸ್ಥಳೀಯರಿಗೆ ಹೆಚ್ಚು ಅವಕಾಶ ಕೊಟ್ಟಿದ್ದ ರಾಜ್ ಬಿ ಶೆಟ್ಟಿ ನಿರ್ಮಾಪಕರಾಗಿ ಈ ಚಿತ್ರದಲ್ಲೂ ಸ್ಥಳೀಯರನ್ನೇ ಹೆಚ್ಚಾಗಿ ಬಳಸಿಕೊಂಡು ಆಯಾ ಪಾತ್ರಕ್ಕೆ ಸಮಾನವಾಗಿ ಸ್ಕ್ರೀನ್ ಸ್ಪೇಸ್ ಕೊಟ್ಟಿದ್ದಾರೆ.ತುಳು ನಾಟಕರಂಗದಲ್ಲಿ ಹೆಸರುಗಳಿಸಿರುವ ಜೆಪಿ ತುಮಿನಾಡು ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶನದ ಜತೆಗೆ ನಟನೆಯಲ್ಲಿ ಅವರು ಎಲ್ಲರ ಮನ ಗೆದ್ದಿದ್ದಾರೆ.ಚಿತ್ರದ ನಿರ್ಮಾಪಕರಾಗಿರುವ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಮತ್ತು ಸಂಭಾಷಣೆಯ ಶೈಲಿ ಪ್ರೇಕ್ಷಕರಿಗೆ ಇಷ್ಟವಾಗುವುದು ಖಂಡಿತ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *