Breaking News

ಹುಬ್ಬಳ್ಳಿಯಲ್ಲಿ ಜನಸ್ನೇಹಿ ಕರಿ ಮಂಗ



ಕಪ್ಪಗಿರೋ ಮೂಷ್ಯಾ ಗಳು ಒಂದಷ್ಟು ಡೇಂಜರ್. ಅವು ಕಚ್ಚೋಕೆ ಆರಂಭಿಸಿದ್ವು ಅಂದ್ರೆ, ಮನುಷ್ಯನ ಜೀವವನ್ನೂ ಬಲಿಪಡಿಯೋಷ್ಟು ಶಕ್ತಿ ಅವಕ್ಕಿವೆ. ಆದ್ರೆ ಇಲ್ಲೊಂದು ಕರಿ ಮಂಗ ಕಾಡು ಬಿಟ್ಟು ನಾಡು ಸೇರಿಕೊಂಡಿದೆ .

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಂದಿರೋ ಈ ಮಂಗ ಹೋಟೆಲ್ ಮಾಲೀಕನಂತೆಯೇ ವರ್ತಿಸ್ತಿದೆ. ಹೋಟೆಲ್ ನ ಕೌಂಟರ್ ಬಳಿ ಕೂಡೋದು, ಅಡುಗೆ ಮನೆಯಲ್ಲಿ ಕೆಲಸ ಮಾಡೋದ್ರ ಪರಿಶೀಲನೆ ಮಾಡೋದು ಎಲ್ಲಾನೂ ಮಾಡುತ್ತೆ ಈ ಕೋತಿ.

ಹೋಟೆಲ್ ನಲ್ಲಿ ಕೊಡೋ ಪೂರಿ ಮತ್ತಿತರ ತಿಂಡಿಯನ್ನೂ ಕುಳಿತು ಹಾಯಾಗಿ ಸೇವಿಸುತ್ತೆ. ನೀರು ಬೇಕಿದ್ರೆ ಟ್ಯಾಂಕ್ ಗೆ ಮುಟ್ಟಿ ತೋರಿಸುತ್ತೆ ಈ ಕೋತಿ. ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣದಲ್ಲಿನ ಉದ್ಯಾನವದದಲ್ಲಿ ಬೀಡು ಬಿಟ್ಟಿದೆ. ಹೋಟೆಲ್, ಅಂಗಡಿ ಇತ್ಯಾದಿಗಳ ಕಡೆ ಹೋಗಿ ತನಗೆ ಬೇಕಾದ್ದನ್ನು ಪಡೆದು ತಿಂದುಕೊಂಡು ಬರ್ತಿದೆ. ಜನ ಏನೇ ಕೊಟ್ಟರೂ ತನಗೆ ಬೇಕಾದ್ದನ್ನು ಮಾತ್ರ ತಿಂದು ಉಳಿದದ್ದನ್ನು ಅಲ್ಲಿಯೇ ಬಿಟ್ಟು ಹೋಗ್ತಿದೆ.

ಕಳೆದ ಒಂದು ವಾರದಿಂದಲೂ ಮಂಗ ಇಲ್ಲಿಯೇ ಠಿಕಾಣಿ ಹೂಡಿದೆ. ಆದರೆ ಯಾರಿಗೆ ಏನೂ ತೊಂದರೆ ಕೊಟ್ಟಿಲ್ಲ ಅಂತ ಹೇಳುತ್ತಿರೋ ನಾಗರೀಕರು ತಮಗನಿಸಿದ್ದನ್ನು ತಿನ್ನೋಕೆ ಕೊಟ್ಟು ಮುಂದೆ ಸಾಗುತ್ತಿದ್ದಾರೆ. ಕೆಲವೊಬ್ಬರಂತೂ ಅದ್ರ ಜೊತೆ ಸೆಲ್ಫೀನೂ ತಗೊಂಡ್ ಹೋಗುತ್ತಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *