ಕಲಬುರಗಿಯ ರಾಮತೀರ್ಥನಗರದ ಮಹಾಂತಪ್ಪ ಕೊತ್ಲೆ ಎಂಬ ವ್ಯಕ್ತಿ ವೀರಶೈವ ಲಿಂಗಾಯತ ಸಮುದಾಯದವರು. ಇವರು ತಮ್ಮ ಪುತ್ರನ ಜಾತಿ ಮತ್ತು ಆದಾಯ ಪ್ರಮಾಣ ಪಾತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆದು ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರಮಾಣ ಪತ್ರದ ಜಾತಿ ಕಾಲಂನಲ್ಲಿ ಮುಸ್ಲಿಂ ಅಂತಾ ಉಲ್ಲೇಖಿಸಿ ಅಧಿಕಾರಿಗಳು ವಿತರಿಸಿದ್ದಾರೆ.ಅಷ್ಟು ಮಾತ್ರವಲ್ಲದೇ ಅವರು ಅಸುನೀಗಿದ್ದಾರೆ ಅಂತ ಹೇಳಿ ಅವರ ಮಕ್ಕಳ ಬದಲಾಗಿ ಇನ್ನಾರದ್ದೋ ಮಕ್ಕಳಿಗೆ ಜಮೀನನ್ನು ಕಂದಾಯ ಇಲಾಖೆ ಖಾತೆ ಮಾಡಿಕೊಟ್ಟಿತ್ತು. ಈ ಎಡವಟ್ಟಿನ ವಿರುದ್ಧ ವ್ಯಕ್ತಿಯ ಕುಟುಂಬ ಮತ್ತು ಊರಿನವರು ನಾಡ ಕಚೇರಿಗೆ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

