ರಶ್ಮಿಕಾ ಮಂದಣ್ಣ ಒಂದರ ನಂತರ ಒಂದು ಸಿನಿಮಾಗಳನ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾವೊಂದರ ಹಾಡು ಸಹ ರಿಲೀಸ್ ಆಗಿತ್ತು. ಇದೀಗ ಅವರ ಮತ್ತೊಂದು ಸಿನಿಮಾದ ಮುಹೂರ್ತ ಪೂಜೆಯಾಗಿದ್ದು, ಚಿತ್ರೀಕರಣ ಆರಂಭವಾಗಿದೆ.ಸೆಟ್ಟೇರಿದ ಮೈಸಾ ಸಿನಿಮ ಭಾನುವಾರ ಹೈದರಾಬಾದ್‌ನಲ್ಲಿ ರಶ್ಮಿಕಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಮೈಸಾದ ಮುಹೂರ್ತ ಪೂಜೆಯಾಗಿದ್ದು, ಸಾಂಪ್ರದಾಯಿಕವಾಗಿ ಸಿನಿಮಾ ಸೆಟ್ಟೇರಿದೆ ಎನ್ನಬಹುದು. ನಿರ್ದೇಶಕ ರವೀಂದ್ರ ಪುಲ್ಲೆ ಅವರ ಮೊದಲ ಸಿನಿಮಾ ಇದಾಗಿದ್ದು, ಈ ಆಕ್ಷನ್ ಥ್ರಿಲ್ಲರ್ ಚಿತ್ರವು ರಶ್ಮಿಕಾ ಅವರ ವೃತ್ತಿಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ ಎನ್ನಲಾಗುತ್ತಿದ್ದು, ಮೊದಲ ಬಾರಿಗೆ ಆಕ್ಷನ್ ಸಿನಿಮಾದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.ಅವರ ಮುಖದಲ್ಲಿ ರಕ್ತದ ಕಲೆಗಳಿದ್ದು, ದುಷ್ಟರನ್ನ ಹೊಡೆದು ಹಾಕಲು ರೊಚ್ಚಿಗೆದ್ದು ಕಾಯುತ್ತಿರುವಂತೆ ಕಾಣುತ್ತಿದೆ. ಅವರ ಕಣ್ಣಲ್ಲಿ ಸಹ ಆಕ್ರೋಶ ಕಾಣಿಸುತ್ತಿದ್ದು, ಕೈನಲ್ಲಿ ರಕ್ತ ತಾಗಿರುವ ಆಯುಧ ಹಿಡಿದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

