ಬೆಂಗಳೂರು: ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಭೆ ನಡೆಸುತ್ತೇವೆ. ಜೆಡಿಎಸ್ ನಾಯಕರ ಜೊತೆ ಇಂದು ಸಭೆ ನಡೆಸುತ್ತೇವೆ. ಇದು ಆರಂಭಿಕ ಹಂತದ ಸಭೆ ಅಷ್ಟೇ ಎಂದಿದ್ದಾರೆ.ಸಭೆಗೆ ನಾನು ಹಾಗೂ ದಿನೇಶ್ ಗುಂಡೂರಾವ್ ಹೋಗುತ್ತಿದ್ದೇವೆ. ಇದುವರೆಗೂ ಇಷ್ಟೇ ಸೀಟು ಬೇಕೆಂದು ಜೆಡಿಎಸ್ ನಾಯಕರು ಕೇಳಿಲ್ಲ. ಹಾಗೇ ಎಲ್ಲರೂ ಒಂದೊಂದು ಮಾತು ಹೇಳುತ್ತಿದ್ದಾರೆ.ಇವತ್ತಿನ ಸಭೆಯೇ ಅಂತಿಮ ಅಲ್ಲ. ಚರ್ಚೆ ಮಾಡಿ ಆದಷ್ಟು ಬೇಗ ಸೀಟು ಹಂಚಿಕೆ ಅಂತಿಮ ಮಾಡುತ್ತೇವೆ. ಇವತ್ತಿನ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಫೈನಲ್ ಆದರೆ ಸಂತೋಷ. ಇಲ್ಲವಾದರೆ ಮುಂದೆ ಮತ್ತೆ ಸಭೆ ಸೇರಿ ನಿರ್ಧಾರ ಮಾಡುತ್ತೇವೆ.ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡಎಂಟು ಸಾವಿರಕ್ಕೂ ಹೆಚ್ಚು ಪ್ರದೇಶಕ್ಕೆ ಬೆಂಕಿ ಬಿದ್ದಿದೆ. ಯಾರಾದರೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರಾ? ಎಂಬುದರ ಬಗ್ಗೆ ತಿಳಿಯಬೇಕಿದೆ.ಈಗಾಗಲೇ ಅರಣ್ಯ ಸಚಿವರು ಅಲ್ಲಿಗೆ ಹೋಗಿದ್ದಾರೆ. ಬೆಂಕಿ ನಂದಿಸಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನ ಸರ್ಕಾರ ತ್ವರಿತವಾಗಿ ಮಾಡುತ್ತಿದೆ.ಕೃಷ್ಣ ಭೈರೇಗೌಡ ಟಿಫಿನ್ ವಿಚಾರನಾವು ಒಂದು ಪದ್ಧತಿ ಮಾಡಿಕೊಂಡಿದ್ದೇವೆ. ಪ್ರತಿ ಕ್ಯಾಬಿನೆಟ್ ನಲ್ಲಿ ಯಾರಾದರೂ ಒಬ್ಬ ಸಚಿವರು ತಿಂಡಿ ಮಾಡಿಸಬೇಕು ಅಂತಾ.ತಿಂಡಿಯ ಜೊತೆಗೆ ಕ್ಯಾಬಿನೆಟ್ ನಲ್ಲಿ ಏನೆಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು ಅದನ್ನು ಮಾಡ್ತೇವೆ. ಕ್ಯಾಬಿನೆಟ್ ನಲ್ಲಿ ಏನೆಲ್ಲಾ ಚರ್ಚೆ ಮಾಡಬೇಕೋ ಎಂಬುದರ ಬಗ್ಗೆ ಅಲ್ಲಿ ಚರ್ಚೆ ಮಾಡ್ತೀವಿ. ಕೆಲವೊಂದು ಕ್ಯಾಬಿನೆಟ್ ನಲ್ಲಿ ಈ ರೀತಿ ತಿಂಡಿ ಜೊತೆಗೆ ಚರ್ಚೆಗಳು ಆಗಿಲ್ಲ. ಆದರೆ ಇನ್ಮುಂದೆ ನಡೆಯುವ ಕ್ಯಾಬಿನೆಟ್ ಗಳಲ್ಲಿ ಈ ಪದ್ಧತಿ ಮುಂದುವರೆಯಲಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





