ಪಟ್ಟಣದ ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಗಿಲಿಕೇನಹಳ್ಳಿಯ ಅಜ್ಜಯ್ಯ ಅವರ ಮನೆಗೆ ಶನಿವಾರ ಸಚಿವ ಡಿ. ಸುಧಾಕರ್ ಹಾಗೂ ಮಾಜಿ ಸಚಿವ ಎಚ್. ಆಂಜನೇಯ ಭೇಟಿ ನೀಡಿ, ಪತ್ನಿ ಪುಷ್ಪಾವತಿ ಅವರಿಗೆ ಧನಸಹಾಯ ಮಾಡಿ ಸಾಂತ್ವನ ಹೇಳಿದರು.ಪ್ರತಿಭಟನೆ ನಡೆಸಿದ ಗ್ರಾಮದ 15 ಜನರ ಮೇಲೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದಾಗ ಯಾರ ವಿರುದ್ಧವೂ ಪ್ರಕರಣ ದಾಖಲಿಸಲು ಬಿಡುವುದಿಲ್ಲ ಎಂದು ಸಚಿವ ಡಿ.ಸುಧಾಕರ್ ಹಾಗೂ ಆಂಜನೇಯ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಹನುಮಂತಪ್ಪ, ಪಿ.ಆರ್. ಶಿವಕುಮಾರ್, ಪಾಡಿಗಟ್ಟೆ ಸುರೇಶ್, ಸಂಗನ ಗುಂಡಿ ಮಂಜುನಾಥ್, ಪಿ. ಹನುಮಂತಪ್ಪ, ಕರಿಯಪ್ಪ, ಎಂ.ಟಿ. ರಾಜಪ್ಪ, ಎಂ.ಜೆ. ಹನುಮಂತಪ್ಪ, ಸಿ. ರಾಮಪ್ಪ, ರೆಡ್ಡಿ ರಂಗಪ್ಪ, ಡಿ.ಸಿ. ನವೀನ್, ಎಂ.ಟಿ. ರಂಗಸ್ವಾಮಿ, ಕುಬೇಂದ್ರಪ್ಪ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

