ಸಾಮಾನ್ಯವಾಗಿ ಮಕ್ಕಳಿಲ್ಲದ ಪೋಷಕರು ದಾನಿಗಳಿಂದ ವೀರ್ಯ ಮತ್ತು ಅಂಡಾಣುಗಳನ್ನು ಪಡೆಯಲಾಗುತ್ತದೆ. ಆ ದಾನಿಗಳು ಸುಶಿಕ್ಷಿತರು ಮತ್ತು ಬುದ್ಧಿವಂತರಾಗಿರಬೇಕು ಎಂದು ಹೇಳಲಾಗುತ್ತದೆ. ಆದರೆ ಹೆಚ್ಚಿನ ಹಣದ ಆಸೆಗೆ ಕೆಲವರು ವಿಕೃತಿ ಮೆರೆಯುತ್ತಿದ್ದಾರೆ. ‘ಇಂಡಿಯನ್ ಸ್ಪರ್ಮ್ ಟೆಕ್ ಕ್ರಯೋಸಿಸ್ಟಮ್ ಕ್ಲಿನಿಕ್’ ಹೆಸರಿನಲ್ಲಿ ಸಿಕಂದರಾಬಾದ್‌ನಲ್ಲಿ ಈ ವ್ಯವಹಾರವನ್ನು ನಡೆಸುತ್ತಿದ್ದ ಏಳು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.ಭಿಕ್ಷುಕರಿಗೆ ಬಿರಿಯಾನಿ.. ಸಣ್ಣಪುಟ್ಟ ಕೆಲಸಗಾರರಿಗೆ ಎಣ್ಣೆ.. ಅಲ್ಪ ಸ್ವಲ್ಪ ಓದಿದವರಿಗೆ 1,000 ರಿಂದ 4,000 ರೂ.!. ಜೊತೆಗೆ ಮಹಿಳೆಯರಿಗೆ 20,000 ರಿಂದ 25,000 ರೂ.!! ಇದು ಯಾಕೆ ಅಂತೀರ. ವೀರ್ಯ ದಾನ ಮಾಡಿದ್ರೆ ಇವರಿಗೆ ನೀಡಲಾಗುವ ಹಣ ಇದು!.
bigtvnews | Hubli Dharwad News | Kannada News | Karnataka News Hubli News | News In Hubli | Local news

