Breaking News

ಇನ್ನೂ ನಾಲ್ಕು ದಿನ ಎನ್ ಎಲ್ ಬಿ ಸಿ ಕಾಲುವೆಗೆ ನಿರಂತರವಾಗಿ ನೀರು ಹರಿಸಲು ಸೂಚನೆ: ಸಚಿವ ಶರಣಬಸಪ್ಪ

ಶಹಾಪುರ: ಮುಂಗಾರು ಹಂಗಾಮಿನ ಭಾಗವಾಗಿ ಇನ್ನೂ ನಾಲ್ಕು ದಿನ ಎನ್‌ಎಲ್‌ಬಿಸಿ ಕಾಲುವೆಗೆ ನಿರಂತರವಾಗಿ ನೀರು ಹರಿಸಲು ಸೂಚಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ನಿಗದಿತ ನಿಯಮದ ಪ್ರಕಾರ ಭಾನುವಾರ(ನ.17) ಕಾಲುವೆ ನೀರು ಸ್ಥಗಿತಗೊಳಿಸಬೇಕಾಗಿತ್ತು.
ಆದರೆ ರೈತರ ಹಿತದೃಷ್ಟಿಯಿಂದ ನ.17ರಿಂದ 20ರವರೆಗೆ ಕಾಲುವೆಗೆ ನಿರಂತರವಾಗಿ ನೀರು ಹರಿಸಲು ನಿಗಮದ ಅಧಿಕಾರಿಗಳಿಗೆ ಶನಿವಾರ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸೂಚಿಸಿದೆ ಎಂದು ತಿಳಿಸಿದರು.
ಬೇಸಿಗೆ ಹಂಗಾಮಿನ ಬೆಳೆಗೆ ಡಿಸೆಂಬರ್‌ 9ರಿಂದ ಮಾರ್ಚ್ 25ರವರೆಗೆ ನೀರು ಹರಿಸಲು ಸಲಹಾ ಸಮಿತಿ ಸಭೆಯಲ್ಲಿ 14 ದಿನ ನೀರು ಹರಿಸಿ 10 ದಿನ ಕಾಲುವೆ ನೀರು ಸ್ಥಗಿತಗೊಳಿಸಿ ವಾರಬಂದಿ ನಿಯಮದ ವೇಳಾ ಪಟ್ಟಿಯಂತೆ ನೀರು ಹರಿಸಲು ನಿರ್ಧರಿಸಿದೆ. ರೈತರು ನಿಗದಿಪಡಿಸಿದ ಅವಧಿಯಲ್ಲಿ ಬರುವ ಬೆಳೆಯನ್ನು ಹಾಕಿಕೊಳ್ಳಬೇಕು. ಅನವಶ್ಯಕವಾಗಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *